Publish Date: Sat, 21 Apr 2018 (09:01 IST)
Updated Date: Sat, 21 Apr 2018 (09:03 IST)
ಬೆಂಗಳೂರು: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಬಹುತೇಕ ಖಾತ್ರಿಯಾಗಿದೆ. ಅದಕ್ಕೆ ಕಾರಣವೂ ಬಯಲಾಗಿದೆ.
ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಲು ಕಾರಣ ಖಾಸಗಿ ಸಸ್ಥೆಯೊಂದು ಸಮೀಕ್ಷಾ ವರದಿ ನೀಡಿದ ನಂತರ ಸಿಎಂ ಈ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಈ ವರದಿ ನಾಲ್ಕು ದಿನಗಳ ಹಿಂದಷ್ಟೇ ಸಿಎಂ ಕೈ ಸೇರಿದ್ದು, ಇದರಲ್ಲಿ ಸಿಎಂಗೆ ಈ ಬಾರಿ ಚಾಮುಂಡೇಶ್ವರಿಯಲ್ಲಿ ರಿಸ್ಕ್ ಫ್ಯಾಕ್ಟರಿ ಜಾಸ್ತಿ ಎಂದಿತ್ತು ಎನ್ನಲಾಗಿದೆ.
ಹೀಗಾಗಿ ಬಾದಾಮಿಯಲ್ಲೂ ಸ್ಪರ್ಧೆಗೆ ಸಿಎಂ ಮನಸ್ಸು ಮಾಡಿದ್ದಾರೆ. ಆದರೆ ಇದಕ್ಕೆ ಇಂದು ನಡೆಯಲಿರುವ ಹೈಕಮಾಂಡ್ ಸಭೆಯಲ್ಲಿ ಅಂತಿಮ ಮುದ್ರೆ ಬೀಳಬೇಕಿದೆ. ಹೈಕಮಾಂಡ್ ಒಪ್ಪಿಗೆಗಾಗಿ ಇದೀಗ ಸಿಎಂ ಕಾಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.