Publish Date: Sat, 26 May 2018 (13:48 IST)
Updated Date: Sat, 26 May 2018 (13:51 IST)
ಪಣಜಿ: ಗೋವಾದ ಬೀಚ್‌ವೊಂದರಲ್ಲಿ ಪ್ರಿಯಕರನ ಎದುರೇ ಯುವತಿಯೊಬ್ಬಳ ಮೇಲೆ ಮೂವರು ಕಾಮುಕರು ಗ್ಯಾಂಗ್‌ರೇಪ್ ನಡೆಸಿದ ಘಟನೆ ನಡೆದಿದೆ.
ಬೀಚ್ ನಲ್ಲಿ ವಿಹರಿಸುತ್ತಿದ್ದ ಜೋಡಿಯನ್ನು ಕಾಮುಕರು ಹಿಡಿದು ಅವರ ಬಟ್ಟೆ ತೆಗೆದು ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಬಳಿಕ ಸರದಿಯಂತೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.ಇದುವರೆಗೆ ಯಾವುದೇ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ.