Publish Date: Mon, 26 Feb 2018 (10:36 IST)
Updated Date: Mon, 26 Feb 2018 (10:38 IST)
ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅನಾರೋಗ್ಯದ ಪರಿಸ್ಥಿತಿಯಲ್ಲೂ ಮಹದಾಯಿ ಮಾತುಕತೆಗಾಗಿ ರಾಜ್ಯ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಗೆ ಆಹ್ವಾನ ನೀಡಿದ್ದಾರೆ.
ಹಿಂದೊಮ್ಮೆ ಬಿಜೆಪಿ ನಾಯಕರು ಸಿಎಂ ಪರಿಕ್ಕರ್ ಜತೆಗೆ ಮಾತುಕತೆ ನಡೆಸಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಟೀಕೆಗೆ ಗುರಿಯಾಗಿತ್ತು.
ರಾಜ್ಯದ ಸಿಎಂ ಜತೆ ಮಾತುಕತೆ ನಡೆಸುವುದು ಬಿಟ್ಟು, ಬಿಜೆಪಿ ನಾಯಕರ ಜತೆ ಸಭೆ ನಡೆಸುವುದು ಕೇವಲ ರಾಜಕೀಯ ಉದ್ದೇಶದಿಂದಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು. ಇದೀಗ ಮತ್ತೆ ಬಿಜೆಪಿ ನಾಯಕರಿಗೆ ಮಾತುಕತೆಗೆ ಆಹ್ವಾನ ನೀಡಲಾಗಿದ್ದು, ಎರಡು ದಿನಗಳೊಳಗೆ ಸಮಯ ನಿಗದಿಯಾಗಲಿದೆ. ಸ್ವತಃ ಪರಿಕ್ಕರ್ ದೂರವಾಣಿ ಮುಖಾಂತರ ಶೆಟ್ಟರ್ ಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ