Publish Date: Mon, 05 Feb 2018 (10:44 IST)
Updated Date: Mon, 05 Feb 2018 (10:46 IST)
ಬೆಂಗಳೂರು: ಪರಿವರ್ತನಾ ರ್ಯಾಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಗಂಟೆ ಭಾಷಣ ಮಾಡಿದ ಪ್ರಧಾನಿ ಮೋದಿ ಮಹದಾಯಿ ವಿವಾದದ ಬಗ್ಗೆ ಮಾತನಾಡದೇ ಇರುವುದು ಎಲ್ಲರಿಗೆ ನಿರಾಶೆಯುಂಟು ಮಾಡಿದೆ.
ಈ ಬಗ್ಗೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಇಂದು ವಿಧಾನಸೌದದಲ್ಲಿ ಸಮಜಾಯಿಷಿ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಮಹದಾಯಿ ವಿವಾದದ ಬಗ್ಗೆ ಏನೂ ಹೇಳಲೇ ಇಲ್ಲವಲ್ಲ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಸದಾನಂದ ಗೌಡ ಇದೊಂದು ರಾಜಕೀಯ ಕಾರ್ಯಕ್ರಮವಾಗಿತ್ತು. ಇಲ್ಲಿ ಅಂತರಾಜ್ಯ ಜಲ ವಿವಾದದ ಬಗ್ಗೆ ಹೇಗೆ ಮಾತನಾಡಲು ಸಾಧ್ಯ? ಎಂದು ಮರು ಪ್ರಶ್ನಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಶಿಷ್ಟಾಚಾರಕ್ಕೂ ಸ್ವಾಗತಿಸದ ಸಿಎಂ ಸಿದ್ದರಾಮಯ್ಯ ವಿರುದ್ಧ ಸದಾನಂದ ಗೌಡರು ಟೀಕಿಸಿದ್ದಾರೆ. ಸಿಎಂ ಈ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ