Select Your Language

Notifications

webdunia
webdunia
webdunia
webdunia

ಮಹದಾಯಿ ವಿವಾದ ಕುರಿತು ಗೋವಾದ ಮನವಿಗೆ ರಾಜ್ಯ ಸರ್ಕಾರ ವಿರೋಧ

ಮಹದಾಯಿ ವಿವಾದ ಕುರಿತು ಗೋವಾದ ಮನವಿಗೆ ರಾಜ್ಯ ಸರ್ಕಾರ ವಿರೋಧ
ಬೆಂಗಳೂರು , ಶುಕ್ರವಾರ, 9 ಫೆಬ್ರವರಿ 2018 (07:16 IST)
ಬೆಂಗಳೂರು : ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ನ್ಯಾಯಮಂಡಳಿಯ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಬೇಕೆಂದು ಗೋವಾದ ಮನವಿಗೆ ವಿರೋಧ ವ್ಯಕ್ತಪಡಿಸಲು  ರಾಜ್ಯ ಸರ್ಕಾರ ತೀರ್ಮಾನಿಸಿದೆ.


ಈ ಕುರಿತು ವಿಧಾನಮಂಡಲದ ಉಭಯ ಸದನಗಳ ನಾಯಕರ ಜೊತೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿ ಚರ್ಚಿಸಿದಾಗ ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದು  ಗೋವಾದ ಮನವಿಗೆ ವಿರೋಧ ವ್ಯಕ್ತಪಡಿಸಲು  ನಿರ್ಧರಿಸಿದ್ದಾರೆ.
ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ‘ಮಹದಾಯಿ ವಿವಾದ ಬಗೆಹರಿಸಲು 2010 ರಲ್ಲಿ ನ್ಯಾಯಮಂಡಳಿ ರಚನೆ ಮಾಡಲಾಗಿದೆ. ನ್ಯಾಯಾಮಂಡಲಿ ಮೂರು ವರ್ಷದಲ್ಲಿ ವರದಿ ನೀಡಬೇಕು. ಆದರೆ ಮಹದಾಯಿ ನ್ಯಾಯ ಮಂಡಳಿಯನ್ನು ಎರಡು ಬಾರಿ ವಿಸ್ತರಿಸಲಾಗಿದೆ. ಕಾನೂನಿನಲ್ಲಿ ಎರಡು ಬಾರಿಗಿಂತ ಹೆಚ್ಚು ಸಮಯ ನ್ಯಾಯಾಮಂಡಳಿಯನ್ನು ವಿಸ್ತರಿಸಲು ಅವಕಾಶವಿಲ್ಲ. ಹೀಗಾಗಿ ರಾಜ್ಯ ಸರ್ಕಾರವೂ ನ್ಯಾಯ ಮಂಡಳಿಯ ಅವಧಿಯನ್ನು ವಿಸ್ತರಿಸದೇ ನಿಗದಿತ ಸಮಯದಲ್ಲಿಯೇ ಆದೇಶ ನೀಡುವಂತೆ ಕೇಳಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂಗಳ ಮತಗಳು ಬೇಕಿಲ್ಲವೆಂದು ಸರ್ಕಾರ ಹೇಳಲಿ- ಸಂಸದ