Publish Date: Wed, 04 Apr 2018 (07:32 IST)
Updated Date: Wed, 04 Apr 2018 (07:36 IST)
ಮುಂಬೈ : 2017ರಲ್ಲಿ ತೆರೆಕಂಡ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಅಭಿನಯಿಸಿದ್ದು, ಈ ಚಿತ್ರದ ಮೂಲಕ ಅವರು ಬಹಿರ್ದೆಸೆಯ ಕರಾಳ ಮುಖದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶ್ರಮಿಸಿದ್ದರು. ಆದರೆ ಹಲವರು ಇದೆಲ್ಲಾ ಸಿನಿಮಾ ಪಬ್ಲಿಸಿಟಿಗಾಗಿ ಮಾಡಿರುವುದು ಎಂದು ಆರೋಪಿಸಿದ್ದರು.
ಆದರೆ ಇದೀಗ ನಟ ಅಕ್ಷಯ್ ಕುಮಾರ್ ಅವರು ಈ ಆರೋಪ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ಅದು ಹೇಗೆಂದರೆ ಜುಹು ಬೀಚ್ ನಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಅವರ ಜೊತೆಗೆ ಕೈಜೋಡಿಸಿದ ಅಕ್ಷಯ್ ಕುಮಾರ್ ಅವರು ಅದಕ್ಕಾಗಿ 10 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಇದ್ದರಿಂದಾಗಿ ಜುಹು ಬೀಚ್ ಪ್ರದೇಶದಲ್ಲಿ ಈಗ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಅವರು ನಿಜವಾದ ಪರಿಸರ ಕಾಳಜಿ ತಮಗೂ ಇದೆ ಎಂಬುದನ್ನು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ