Select Your Language

Notifications

webdunia
webdunia
webdunia
webdunia

ನಟಿಯ ನಗ್ನ ವಿಡಿಯೋವನ್ನು ಇಂಟರ್ ನಟ್ ನಲ್ಲಿ ಅಪ್ಲೋಡ್ ಮಾಡಿದ ಭೋಜ್ಪುರಿಯ ನಿರ್ಮಾಪಕ!

ನಟಿಯ ನಗ್ನ ವಿಡಿಯೋವನ್ನು ಇಂಟರ್ ನಟ್ ನಲ್ಲಿ ಅಪ್ಲೋಡ್ ಮಾಡಿದ ಭೋಜ್ಪುರಿಯ ನಿರ್ಮಾಪಕ!
ಭೋಜ್ಪುರಿ , ಬುಧವಾರ, 4 ಏಪ್ರಿಲ್ 2018 (07:23 IST)
ಭೋಜ್ಪುರಿ : ಸಿನಿಮಾರಂಗದಲ್ಲಿ ನಿರ್ಮಾಪಕರು ನಟಿಯರಿಗೆ  ಯಾವ ರೀತಿಯಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬುದನ್ನು ನಾವು ಈಗಾಗಲೇ ಸಾಕಷ್ಟು ಬಾರಿ ನಟಿಯರ ಬಾಯಿಂದಲ್ಲೇ ಕೇಳಿ ತಿಳಿದಿದ್ದೇವೆ. ಅದೇರೀತಿ ನಟಿಯ ಅಶ್ಲೀಲ ವಿಡಿಯೋಗಳನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ್ದರಿಂದ ಭೋಜ್ಪುರಿ ಚಿತ್ರ ನಿರ್ಮಾಪಕನೊಬ್ಬ  ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ನಿರ್ಮಾಪಕ 19 ವರ್ಷದ ಉಪೇಂದ್ರ ಕುಮಾರ್ ವರ್ಮಾ ಎಂಬುದಾಗಿ ತಿಳಿದುಬಂದಿದ್ದು, ಈತ ಶಾರ್ಟ್ ಫಿಲ್ಮ್ ಗಳನ್ನು ನಿರ್ಮಾಣ ಮಾಡುತ್ತಿದ್ದನು. ಚಿತ್ರವೊಂದರಲ್ಲಿ ಬಾತ್ ರೂಮಿನಿಂದ ನಾಯಕಿ ಟವಲ್ ಉಟ್ಟು ಬರುವ ದೃಶ್ಯವಿದ್ದು, ಅದರ ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ನಟಿಯ ಟವಲ್ ಕಳಚಿ ಬಿದ್ದಿತ್ತು.ಈ ದೃಶ್ಯವನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದ ಉಪೇಂದ್ರ ಕುಮಾರ್, ನಟಿಯ ನಗ್ನ ವಿಡಿಯೋವನ್ನು ಆಕೆಗೆ ತಿಳಿಯದ ಹಾಗೇ ಇಂಟರ್ನೆಟ್ ನಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಈ ವಿಷಯ ನಟಿ ಸ್ನೇಹಿತೆಯರಿಂದ ತಿಳಿದು ನಿರ್ಮಾಪಕನ ವಿರುದ್ದ ದೂರು ನೀಡಿದ್ದಾಳೆ. ಈಗ ಆತ ಪೊಲೀಸರರ ಬಂಧನದಲ್ಲಿದ್ದಾನೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಚಿತ್ರದಲ್ಲಿ ವಿಲನ್ ಆಗಲು ಬಯಸಿದ ತಮಿಳುನಟ ಯಾರು ಗೊತ್ತಾ..?