Select Your Language

Notifications

webdunia
webdunia
webdunia
webdunia

ನಟಿ ಪ್ರಿಯಾಂಕಾ ಚೋಪ್ರಾ ಕ್ವಾಂಟಿಕೋ ಶೋನಿಂದ ಹೊರಬರಲು ನಿರ್ಧಾರ ಮಾಡಿದ್ದು ಯಾಕೆ..?

ನಟಿ ಪ್ರಿಯಾಂಕಾ ಚೋಪ್ರಾ ಕ್ವಾಂಟಿಕೋ ಶೋನಿಂದ ಹೊರಬರಲು ನಿರ್ಧಾರ ಮಾಡಿದ್ದು ಯಾಕೆ..?
ಮುಂಬೈ , ಸೋಮವಾರ, 2 ಏಪ್ರಿಲ್ 2018 (07:33 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೇರಿಕಾದ ಕ್ವಾಂಟಿಕೋ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ  ವಿಷಯ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ಪ್ರಿಯಾಂಕಾ ಅವರು ಈ ಶೋನಿಂದ ಹೊರಬರಲು ನಿರ್ಧಾರ ಮಾಡಿದ್ದಾರಂತೆ.


ಈಗಾಗಲೇ ಮೂರು ಸೀಸನ್‌ ಮುಗಿಸಿರುವ ಕ್ವಾಂಟಿಕೋ ಶೋ, 4 ನೇ ಸೀಸನ್‌ಗೂ ಪ್ರಿಯಾಂಕಾ ಅವರನ್ನೇ ಮುಂದುವರೆಸುವ ಸಾಧ್ಯತೆಯಿದ್ದರೂ ಕೂಡ ನಟಿ ಪ್ರಿಯಾಂಕ ಅವರು ಮಾತ್ರ ತಮಗೆ ಇಷ್ಟವಿಲ್ಲವೆಂದು ತಿಳಿಸಿದ್ದಾರಂತೆ. ಕಾರಣ ಇವರು ಬಾಲಿವುಡ್‌ ಚಿತ್ರಗಳ ಮೇಲೆ ಗಮನ ನೀಡಬೆಂಕೆಂಬು ನಿರ್ಧಾರಕ್ಕೆ ಬಂದಿದ್ದಾರಂತೆ.


ಹಾಗೇ ಅಲಿ ಅಬ್ಬಾಸ್‌ ಜಾಫರ್‌ ನಿರ್ದೇಶನ ಮಾಡಲಿರುವ ‘ಭರತ್‌’  ಎನ್ನುವ ಚಿತ್ರದಲ್ಲಿ ನಟಿಸಲು ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಒಪ್ಪಿಕೊಂಡಿದ್ದಾರಂತೆ.  ಪ್ರಿಯಾಂಕಾ ಅವರಿಗೂ ಕೂಡ ಈ ಚಿತ್ರದ ಸ್ಕ್ರಿಪ್ಟ್ ಮೆಚ್ಚುಗೆಯಾಗಿದ್ದರೂ, ಇದುವರೆಗೂ ಯಾವುದೇ ಅಗ್ರಿಮೆಂಟ್‌ಗೆ ಸಹಿ ಮಾಡಿಲ್ವಂತೆ. ಆದರೆ ಕ್ವಾಂಟಿಕೋ ಶೋನಿಂದ ಹೊರಬರುವ ನಿರ್ಧಾರ ಮಾಡಿರುವುದನ್ನು ನೋಡಿದರೆ ಅವರು ‘ಭರತ್’ ಚಿತ್ರಕ್ಕೆ ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ! ಕೊನೆಗೂ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ ದೀಪಿಕಾ - ರಣ್‍ವೀರ್ ಜೋಡಿ!