Select Your Language

Notifications

webdunia
webdunia
webdunia
webdunia

3 ದಿನದ ಪ್ಯಾಡ್‌ಮೆನ್ ಗಳಿಕೆ ಎಷ್ಟು ಗೊತ್ತಾ...!

Sanitary Man of Sacred Land

ಗುರುಮೂರ್ತಿ

ಬೆಂಗಳೂರು , ಸೋಮವಾರ, 12 ಫೆಬ್ರವರಿ 2018 (18:38 IST)
ಕಳೆದ ಶುಕ್ರವಾರ ತೆರೆಕಂಡ ಬಾಲಿವೂಡ್ ಬಿಗ್ ಬಜೆಟ್ ಚಿತ್ರವಾದ ಪ್ಯಾಡ್‌ಮಾನ್‌ಗೆ ಪ್ರೇಕ್ಷಕರಿಂದ ಬಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು 3 ದಿನದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ.
ಹೌದು, ಕಳೆದ ಶುಕ್ರವಾರ ಬಿಡುಗಡೆಗೊಂಡಿದ್ದ ಪ್ಯಾಡ್‌ಮ್ಯಾನ್ ಚಿತ್ರ 3 ದಿನಗಳಲ್ಲಿ 40 ಕೋಟಿ ರೂಪಾಯಿಗಳನ್ನು ಕಲೆಹಾಕಿದೆ. ಅಷ್ಟೇ ಅಲ್ಲ ಈ ಚಿತ್ರವು ಬಾಯಿಂದ ಬಾಯಿಗೆ ಪ್ರಚಾರವಾಗಿ ಜನಪ್ರಿಯತೆ ಗಳಿಸಿದ್ದು ಶುಕ್ರವಾರದಿಂದ ರವಿವಾರದವರೆಗೆ ಸುಮಾರು 40 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಭಾರತಿಯ ಚಲನಚಿತ್ರ ವಿಮರ್ಶಕ ಮತ್ತು ಚಲನಚಿತ್ರ ವ್ಯಾಪಾರ ವಿಶ್ಲೇಷಕರಾದ ತರನ್ ಆದರ್ಶ್ ತಮ್ಮ ಟ್ವಿಟರ್‌ನಲ್ಲಿ ಟ್ವಿಟ್ ಮಾಡಿದ್ದಾರೆ.
 
ಮಹಿಳೆಯರ ಸಮಸ್ಯೆಗಳು ಮತ್ತು ಸಾಮಾಜಿಕ ವ್ಯವಸ್ಥೆಯ ಕುರಿತ ಈ ಚಿತ್ರದಲ್ಲಿ ಅಕ್ಷಯ್ ಕುಮಾರ ನಟನೆ ಅದ್ಭುತವಾಗಿದ್ದು, ರಾಧಿಕಾ ಆಪ್ಟೇ, ಸೋನಮ್ ಕಪೂರ್ ಅಭಿನಯಕ್ಕೆ ಪ್ರೇಕ್ಷಕ ಫೀದಾ ಆಗಿದ್ದಾನೆ. ಪ್ಯಾಡ್‌ಮೆನ್ ಚಿತ್ರವು ಆರ್. ಬಾಲ್ಕಿ ನಿರ್ದೇಶನದಲ್ಲಿ ಮೂಡಿಬಂದಿದ್ದು ಟ್ವಿಂಕಲ್ ಖನ್ನಾ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಒಟ್ಟೂ 5 ಹಾಡುಗಳಿದ್ದು, ಇದು ಕೂಡಾ ಚಿತ್ರದ ಪ್ಲಸ್ ಪಾಯಿಂಟ್ ಅಂತಾನೇ ಹೇಳಬಹುದು. 
webdunia
ಮೂಲಗಳ ಪ್ರಕಾರ ಈ ಚಿತ್ರ ನಿರ್ಮಾಣಕ್ಕೆ 90 ಕೋಟಿ ರೂಪಾಯಿ ತಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರ ಬಿಡುಗಡೆಯಾದ 3 ದಿನದಲ್ಲಿ 40 ಕೋಟಿಗಳಿಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಸಂದೇಹವೇ ಇಲ್ಲ ಅನ್ನುತ್ತಿದ್ದಾರೆ ಬಾಲಿವೂಡ್ ಮಂದಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯ ಭರವಸೆ ಮೂಡಿಸಿದ ಪ್ಯಾಡ್‌ಮ್ಯಾನ್