Publish Date: Wed, 17 Jan 2018 (08:12 IST)
Updated Date: Wed, 17 Jan 2018 (08:14 IST)
ಮುಂಬೈ: ಮಹಿಳೆಯರ ಬಹು ಅಗತ್ಯ ವಸ್ತು ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್ ಟಿ ಸುಂಕ ವಿಧಿಸಿರುವುದರ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಧ್ವನಿಗೂಡಿಸಿದ್ದಾರೆ.
ಅಷ್ಟೇ ಅಲ್ಲ, ಅಕ್ಷಯ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದಲ್ಲಿ ಮಹಿಳೆಯರಿಗೆ ಇದು ಉಚಿತವಾಗಿ ಸಿಗುವಂತಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಸಿನಿಮಾ ಪ್ರಮೋಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅಕ್ಷಯ್ ಈ ಹೇಳಿಕೆ ನೀಡಿದ್ದಾರೆ.
‘ರಕ್ಷಣಾ ಇಲಾಖೆಗೆ ನೀಡುವ ಹಣದಲ್ಲಿ ಶೇ.5 ರಷ್ಟು ಕಡಿತ ಮಾಡಿ, ಒಂದು ಬಾಂಬ್ ಕಡಿಮೆ ತಯಾರಿಸಿ, ಅದನ್ನು ಮಹಿಳೆಯರ ಸ್ಯಾನಿಟರಿ ಪ್ಯಾಡ್ ಗೆ ನೀಡಿ. ಇದನ್ನು ಉಚಿತವಾಗಿ ಮಹಿಳೆಯರಿಗೆ ವಿತರಿಸಿ, ಆ ಮೂಲಕ ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚಿನ ಗಮನಕೊಡಿ’ ಎಂದು ಅಕ್ಷಯ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿಯವರ ಹಲವು ಯೋಜನೆಗಳನ್ನು ಬೆಂಬಲಿಸಿರುವ ಅಕ್ಷಯ್ ಮಾತುಗಳನ್ನು ಕೇಂದ್ರ ಸರ್ಕಾರ ಕೇಳುತ್ತಾ? ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ