Select Your Language

Notifications

webdunia
webdunia
webdunia
webdunia

ಹಾಡು ಹಗಲೇ ಮನೆ ಬಾಗಿಲು ಮುರಿದು ಕಳ್ಳತನ

House
ಆನೇಕಲ್ , ಗುರುವಾರ, 2 ಆಗಸ್ಟ್ 2018 (21:05 IST)
ಮಧ್ಯಾಹ್ನದ ಸಮಯವೇ ಮನೆಯ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಮನೆಯಲ್ಲಿದ್ದ ಚಿನ್ನ ಹಾಗೂ ಹಣ ಕಳವು ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಆನೇಕಲ್ ಪಟ್ಟಣಕ್ಕೆ ಹೊಂದಿಕೊಂಡಿರುವ ಕಾವಲಹೊಸಹಳ್ಳಿ ಬಳಿಯ ಎಸ್.ಆರ್.ಆರ್. ಬಡಾವಣೆಯ ಮಂಜುನಾಥ್ ರೆಡ್ಡಿ ಎಂಬುವವರು ಸೇರಿದ ಮನೆಯಲ್ಲಿ ಕಳ್ಳರು   ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಕಬ್ಬಿಣದ ಸಲಾಕೆಯಿಂದ ಬಾಗಿಲನ್ನು ಮೀಟಿ ಮನೆಯಲ್ಲಿಟ್ಟಿದ್ದ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿದ್ದಾರೆ.

ಇನ್ನು ಸಂಬಂಧಿಕರ ಮನೆಗೆ ತೆರಳಿದ್ದ ಮನೆಯ ಮಾಲೀಕ ಮಂಜುನಾಥ್ ರೆಡ್ಡಿ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: 500 ಲೀ.ಸ್ಪಿರಿಟ್ ವಶ