Select Your Language

Notifications

webdunia
webdunia
webdunia
webdunia

ಪೊಲೀಸರ ಭರ್ಜರಿ ಕಾರ್ಯಾಚರಣೆ: 500 ಲೀ.ಸ್ಪಿರಿಟ್ ವಶ

ಪೊಲೀಸರ ಭರ್ಜರಿ ಕಾರ್ಯಾಚರಣೆ: 500 ಲೀ.ಸ್ಪಿರಿಟ್ ವಶ
ಹುಬ್ಬಳ್ಳಿ , ಗುರುವಾರ, 2 ಆಗಸ್ಟ್ 2018 (21:00 IST)
ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.  525 ಲೀಟರ್ ಸ್ಪಿರಿಟ್ ವಶಪಡಿಸಿಕೊಂಡಿದ್ದಾರೆ. 525 ಲೀ. ಇದ್ದ 15 ಕ್ಯಾನ್ ಸ್ಪಿರಿಟ್ ವಶಕ್ಕೆ ತೆಗೆದುಕೊಂಡಿದ್ದಾರೆ.

ಸುಮಾರು 1 ಲಕ್ಷದ 57 ಸಾವಿರದ 500 ರೂ. ಮೌಲ್ಯದ ಸ್ಪಿರಿಟ್ ಇದಾಗಿದೆ.  ನಗರದ  ಹುಬ್ಬಳ್ಳಿಯ ಹಳೇಹುಬ್ಬಳ್ಳಿ ಪ್ರದೇಶದ ಹೆಗ್ಗೇರಿಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಪಿರಿಟ್, ಪರಶುರಾಮ್ ಮೆಹರವಾಡೆ ಎಂಬುವರ ಮನೆಯಲ್ಲಿತ್ತು. ಖಚಿತ ಮಾಹಿತಿ ಮೇರೆಗೆ  ಕಾರ್ಯಾಚರಣೆ ನಡೆಸಿ ಸ್ಪಿರಿಟ್ ನ್ನು ಪೊಲೀಸರು ವಶಪಡಿಸಿಕೊಂಡರು.

ಪರಶುರಾಮ್ ನ ಮಗ ಸಂಜೀವ್ ಮೆಹರವಾಡೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ.  ಪ್ರಕರಣಕ್ಕೆ‌ಸಂಬಂಧಿಸಿದಂತೆ ಪರಶುರಾಮನ ಬಂಧನವಾಗಿದೆ.  ಇನ್ನೊಬ್ಬ ಆರೋಪಿ ಸಂಜೀವ್ ಮೆಹರವಾಡೆ ಪರಾರಿಯಾಗಿದ್ದಾನೆ. ಆರ್ಥಿಕ ಮತ್ತು ಮಾದಕ ವಸ್ತುಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಸೆರೆ ಸಿಕ್ಕ ಹೆಂಡತಿಗೆ ಕೈಕೊಟ್ಟು ಮತ್ತೊಂದು ಮದುವೆಯಾಗಿದ್ದ ಭೂಪ