Select Your Language

Notifications

webdunia
webdunia
webdunia
webdunia

ಕಣ್ಣಿಗೆ ಖಾರದ ಪುಡಿ ಎರಚಿ 35 ಲಕ್ಷ ರೂ. ಕಿತ್ತರು

ಕಣ್ಣು
ಬೀದರ್ , ಮಂಗಳವಾರ, 31 ಜುಲೈ 2018 (20:20 IST)
ಕಣ್ಣಿಗೆ ಖಾರದ ಪುಡಿ ಎರಚಿ ಬೈಕ್ ಸಮೇತ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ 35 ಲಕ್ಷ ರೂ.ಗಳನ್ನು ಖದೀಮರು ದೋಚಿರುವ ಘಟನೆ ನಡೆದಿದೆ.
ಪ್ರಕಾಶ, ಮಹದೇವ ಎಂಬವರು ಹೊಂಡಾ ಆ್ಯಕ್ಟೀವಾದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ವಾಹನ ಸಮೇತ ಕಳ್ಳತನ ಮಾಡಲಾಗಿದೆ. ಬೀದರ್ ನ ಅಲ್ಲಮ ಪ್ರಭು ನಗರದಲ್ಲಿ ಘಟನೆ ನಡೆದಿದೆ.

ಬೈಕ್ ಗೆ ಡಿಕ್ಕಿ, ಮತ್ತು ತಮ್ಮ ಮುಂದುಗಡೆ ಹಣವಿಟ್ಟುಕೊಂಡು ಚಲಾಯಿಸುತಿದ್ದಾಗ ಕಳ್ಳತನ
ಮಾಡಲಾಗಿದೆ. ಒಂದು ಕಿ.ಮೀ. ದೂರದಲ್ಲಿ ಬೈಕ್ ಬಿಟ್ಟು ಹಣ ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಹಣವಿದ್ದ ಬೈಕ್ ಹೈದ್ರಾಬಾದ್ ರೋಡ್ ಹತ್ತಿರ ಪತ್ತೆಯಾಗಿದೆ.

ಕಳ್ಳರು ಹಣ ತೆಗೆದುಕೊಂಡು ಹೈದ್ರಾಬಾದ್ ಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರತ್ಯೇಕ ರಾಜ್ಯ: ಬಿಎಸ್ವೈ- ಉಮೇಶ ಕತ್ತಿ ತದ್ವಿರುದ್ಧ ಹೇಳಿಕೆ