ದೂರು ನೀಡಲು ಹೋದ ಮಹಿಳೆಯನ್ನ ಪೊಲೀಸ್ ಠಾಣೆಯ ಅಧಿಕಾರಿ ಮಂಚಕ್ಕೆ ಕರೆದ ಆರೋಪ ಕೇಳಿಬಂದಿದೆ. ಜು. 16ರಂದು ದೂರು ನೀಡಿದ್ದರೂ ಈವರೆಗೂ ಯಾವುದೇ ಕ್ರಮವಾಗಿಲ್ಲ. ಪೊಲೀಸ್ ಅಧಿಕಾರಿ ವಿರುದ್ಧ ಮಹಿಳೆ ಎಸ್ಪಿಗೆ ದೂರು ನೀಡಿದ್ದಾರೆ. 
									
			
			 
 			
 
 			
					
			        							
								
																	ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣ ಠಾಣೆಯ ಎಎಸ್ಐ ಶಾಂತಕುಮಾರ್ ವಿರುದ್ಧ ಎಸ್ಪಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತುಪ್ಪದಮಡು ಗ್ರಾಮದ ಲೀಲಾವತಿ ಎಂಬುವವರೇ ದೂರು ನೀಡಿದ ಮಹಿಳೆಯಾಗಿದ್ದಾರೆ. 
									
										
								
																	ಘಟನೆ ವಿವರ:   ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಲೀಲಾವತಿ ತನ್ನ  ಸಹಪಾಠಿ ಮಹಿಳೆಗೆ ಚಿನ್ನದ ಸರ ಕೊಟ್ಟಿದ್ದರು. 
ಆದರೆ ಸಹಪಾಠಿ ಮಹಿಳೆ ಲೀಲಾವತಿಯ ಚಿನ್ನದ ಸರವನ್ನು ವಾಪಸ್ ಮಾಡಲಿಲ್ಲ. ಹೀಗಾಗಿ ಚಿನ್ನದ ಮರಳಿಸದ ಮಹಿಳೆ ವಿರುದ್ಧ ಲೀಲಾವತಿ ಠಾಣೆಗೆ ದೂರು ನೀಡಲು ಹೋಗಿದ್ದರು. ಆಗ ಆ ವೇಳೆ ಎಎಸ್ಐ ಶಾಂತಕುಮಾರ್ ಕೇಸು ದಾಖಲಿಸಿಕೊಳ್ಳಬೇಕಾದಲ್ಲಿ ಒಂದು ದಿನ ತಮ್ಮ ಮನೆಗೆ ಬರುವಂತೆ ಬಲವಂತ ಮಾಡಿದನೆಂದು ದೂರಿನಲ್ಲಿ ಲೀಲಾವತಿ ಆರೋಪಿಸಿದ್ದಾಳೆ.
									
											
							                     
							
							
			        							
								
																	ಅಧಿಕಾರಿ ವಿರುದ್ಧ ಜು.16ರಂದು ದೂರು ನೀಡಿದ್ದರೂ  ಈ ತನಕ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲವೆಂದು ಲೀಲಾವತಿ ತಿಳಿಸಿದ್ದಾರೆ. ನಾಗಮಂಗಲ ಪಟ್ಟಣಠಾಣಾ  ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.