ಉತ್ತರ ಪ್ರದೇಶ : ಉತ್ತರ ಪ್ರದೇಶ ಸರ್ಕಾರಿ ಇಲಾಖೆಯ ವಾಣಿಜ್ಯ ವಿಭಾಗದಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಕೆಲಸ ಮಾಡ್ತಿರುವ ಅಧಿಕಾರಿಯೊಬ್ಬ ತನ್ನ ಸಹೋದ್ಯೋಗಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಿ ಆತನ ವಿರುದ್ಧ ದೂರು ದಾಖಲಾಗಿದೆ.
ಪಂಕಜ್ ಕುಮಾರ್ ಸಿಂಗ್ (48) ಅತ್ಯಾಚಾರ ಎಸಗಿದ ಆರೋಪಿ ಎಂಬುದಾಗಿ ತಿಳಿದುಬಂದಿದೆ. ಇತ ತಮ್ಮ ಸಹೋದ್ಯೋಗಿ ಮಹಿಳೆಯ ಜೊತೆ ಕೆಲಸದ ನಿಮಿತ್ತ ಆಗಸ್ಟ್ 2 ರಂದು ಭೋಪಾಲ್ ಗೆ ಬಂದಿದ್ದ. ಅಲ್ಲಿ ಹೋಟೆಲ್ ಒಂದರಲ್ಲಿ ಇಬ್ಬರು ಬೇರೆ ಬೇರೆ ರೂಮಿನಲ್ಲಿ ತಂಗಿದ್ದರೂ ಕೂಡ ಆತ ಆ ಮಹಿಳೆಯ ರೂಮಿಗೆ ಬಂದು ಬೆದರಿಸಿ ಅತ್ಯಾಚಾರವೆಸಗಿದ್ದಾನೆಂತೆ.
ಅಲ್ಲದೇ ಆಗಸ್ಟ್ 4 ರಂದು ಮಹಿಳೆ ದೆಹಲಿಗೆ ತೆರಳಬೇಕಿತ್ತಂತೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆರೋಪಿ ಮತ್ತೆ ಆಗಸ್ಟ್ ನಾಲ್ಕರಂದು ಅತ್ಯಾಚಾರವೆಸಗಿ ಹಲ್ಲೆ ನಡೆಸಿದ್ದಾನೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಭೋಪಾಲದ ಕಮಲಾನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದುರು ನೀಡಿದ್ದಾಳೆ. ದೂರು ದಾಖಲಾಗ್ತಿದ್ದಂತೆ ಅಧಿಕಾರಿಯನ್ನು ಬಂಧಿಸಿರುವ ಭೋಪಾಲ್ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ