Select Your Language

Notifications

webdunia
webdunia
webdunia
webdunia

ಬಸ್ ನ ಹಿಂದಿನ ಸೀಟಿನಲ್ಲಿ ಕರೆಸಿ ಹುಡುಗನ ಪ್ಯಾಂಟ್ ಜಿಪ್ ಬಿಚ್ಚಿ ಈ ಹುಡುಗರು ಮಾಡಿದ್ದೇನು?

ಬಸ್ ನ ಹಿಂದಿನ ಸೀಟಿನಲ್ಲಿ ಕರೆಸಿ ಹುಡುಗನ ಪ್ಯಾಂಟ್ ಜಿಪ್ ಬಿಚ್ಚಿ ಈ ಹುಡುಗರು ಮಾಡಿದ್ದೇನು?
ನವದೆಹಲಿ , ಶುಕ್ರವಾರ, 10 ಆಗಸ್ಟ್ 2018 (15:24 IST)
ನವದೆಹಲಿ : ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆಗಳನ್ನು ನಾವು ಹಲವು ಬಾರಿ ಕೇಳಿರುತ್ತೇವೆ. ಆದರೆ ನಮ್ಮ ದೇಶದ ರಾಜಧಾನಿಯಾದ ದೆಹಲಿಯ ಖಾಸಗಿ ಶಾಲೆಯೊಂದರ ಬಾಲಕನ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದಾಗಿ ತಿಳಿದುಬಂದಿದೆ.


ಹೌದು. ಪೂರ್ವ ದೆಹಲಿಯ ವಿವೇಕ ವಿಹಾರ ಕಾಲೋನಿಯ ಖಾಸಗಿ ಶಾಲೆಯೊಂದರ 9 ವರ್ಷದ ಬಾಲಕನೊಬ್ಬನಿಗೆ ಹಿರಿಯ ವಿದ್ಯಾರ್ಥಿಗಳು ಖಾಸಗಿ ಶಾಲೆ ಬಸ್ ನಲ್ಲಿ ಕಿರುಕುಳ ನೀಡ್ತಿದ್ದರಂತೆ.  ಈ ವಿಷಯವನ್ನು ಬಾಲಕ  ಬಸ್ ನಲ್ಲಿ ಬರ್ತಿದ್ದ ಶಿಕ್ಷಕಿಗೆ ತಿಳಿಸಿದ್ದರೂ ಕೂಡ,  ಸುಂದರವಾಗಿರುವ ಕಾರಣ, ನಿನ್ನ ಜೊತೆ ತಮಾಷೆ ಮಾಡ್ತಾರೆಂದು ಶಿಕ್ಷಕಿ ವಿಷ್ಯ ಬದಲಾವಣೆ ಮಾಡಿದ್ದಳಂತೆ.


ಮನೆಯಲ್ಲಿ ಸದಾ ಮೌನಿಯಾಗಿರುತ್ತಿದ್ದ ಬಾಲಕನನ್ನು ತಾಯಿ ವಿಚಾರಿಸಿದಾಗ ಈ ವಿಚಾರ ಬಹಿರಂಗವಾಗಿದೆ. 7ನೇ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಬಸ್ ನಲ್ಲಿ ಹಿಂದಿನ ಸೀಟಿಗೆ ಕರೆಯಿಸಿ ಪ್ಯಾಂಟ್ ಜಿಪ್ ಬಿಚ್ಚಿ ಕೆಟ್ಟದಾಗಿ ನಡೆದುಕೊಳ್ತಿದ್ದರಂತೆ. ಈ ಬಗ್ಗೆ  ಪಾಲಕರು, ಶಾಲೆ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.


ಆದರೆ ಅವರು ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಂತ್ರ ಶಿಕ್ಷಕಿ ಹಾಗೂ ಮಕ್ಕಳನ್ನು ಶಾಲೆಯಿಂದ ವಜಾ ಮಾಡಿರುವುದಾಗಿ ಪ್ರಿನ್ಸಿಪಾಲರು ಹೇಳಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬರಗಾಲವಿದ್ದರೂ ಸಿಎಂ ಪ್ರವಾಸ ಮಾಡ್ತಿಲ್ಲ: ಬಿಎಸ್ವೈ ಟೀಕೆ