Select Your Language

Notifications

webdunia
webdunia
webdunia
webdunia

ಲಂಚ ಪಡೆದವರಿಗೆ ಮಾತ್ರವಲ್ಲ ಲಂಚ ಕೊಡುವವರಿಗೂ ಇನ್ನು ಮುಂದೆ ಕಾದಿದೆ ಗೃಹಚಾರ

ಲಂಚ ಪಡೆದವರಿಗೆ ಮಾತ್ರವಲ್ಲ ಲಂಚ ಕೊಡುವವರಿಗೂ ಇನ್ನು ಮುಂದೆ ಕಾದಿದೆ ಗೃಹಚಾರ
ನವದೆಹಲಿ , ಬುಧವಾರ, 1 ಆಗಸ್ಟ್ 2018 (12:37 IST)
ನವದೆಹಲಿ : ದೇಶಾದ್ಯಂತ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ 1988'ಕ್ಕೆ ಮಂಡಿಸಿದ್ದ 'ಭ್ರಷ್ಟಾಚಾರ ತಡೆ (ತಿದ್ದುಪಡಿ) ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಮಾಡಿದ್ದು, ಇಂದಿನಿಂದ ಈ ಕಾನೂನು ಜಾರಿಗೆ ಬರಲಿದೆ.

ಈ ಹೊಸ ಕಾಯ್ದೆಯ ಪ್ರಕಾರ ಇನ್ನು ಮುಂದೆ ಲಂಚ ಪಡೆದವರಷ್ಟೇ ಅಲ್ಲದೇ, ಲಂಚ ಕೊಟ್ಟವರಿಗೂ ಶಿಕ್ಷೆ ವಿಧಿಸಬಹುದಾಗಿದೆ. ಲಂಚ ಕೊಡುವವನಿಗೆ ಕನಿಷ್ಠ ಮೂರು ವರ್ಷ ಶಿಕ್ಷೆ ನೀಡಲಾಗುವುದು ಇದನ್ನು ಏಳು ವರ್ಷಗಳ ವರೆಗೆ ವಿಸ್ತರಿಸಲು ಅವಕಾಶವಿದೆ.

 

ಈ ಕಾಯ್ದೆಯ ವಿಶೇಷವೆಂದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ದೂರು ಬಂದ ತಕ್ಷಣ ಸಿಬಿಐ ಸೇರಿದಂತೆ ಯಾವುದೇ ಸಂಸ್ಥೆಗಳು ತನಿಖೆ ಕೈಗೆತ್ತಿಕೊಳ್ಳುವಂತಿಲ್ಲ. ಸಂಬಂಧಪಟ್ಟವರ ಒಪ್ಪಿಗೆ ಪಡೆದ ನಂತರ ತನಿಖೆ ನಡೆಸಬೇಕಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಪ್ರಕಾರ ಭಯೋತ್ಪಾದನೆಗಿಂತ ಮಹಾಪರಾಧ ಯಾವುದು ಗೊತ್ತಾ?