ನವದೆಹಲಿ : ಮುಕೇಶ್ ಅಂಬಾನಿ ಸ್ಮಾರ್ಟ್ ಫೋನ್, ಟೆಲಿವಿಷನ್, ರೆಫ್ರಿಜರೇಟರ್, ಏರ್ ಕಂಡೀಷನ್ ಮಾರಾಟ ಮಾಡಲು ರಿಲಯನ್ಸ್ ರೀಟೆಲ್ ಆನ್ ಲೈನ್ ಮಳಿಗೆಯೊಂದನ್ನು ಸ್ಥಾಪಿಸಿದ್ದಾರೆ ಎಂದು ಹಿರಿಯ ಇಂಡಸ್ಟ್ರಿ ಎಕ್ಸಿಕ್ಯೂಟಿವ್ಸ್ ಮಾಹಿತಿ ನೀಡಿದ್ದಾರೆ.
ಸ್ಮಾರ್ಟ್‌ಫೋನ್, ಟಿಲಿವಿಷನ್, ಎಲಕ್ಟ್ರಾನಿಕ್ಸ್ ವಿಭಾಗಗಳಲ್ಲಿ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಸುಮಾರು ಶೇ.55 ರಿಂದ 60ರಷ್ಟು ವಹಿವಾಟವನ್ನು ಹೊಂದಿವೆ. ಮುಂಬರುವ ಹಬ್ಬದ ಸೀಸನ್‌ನಲ್ಲಿ ಟೆಲಿವಿಷನ್‌ಗಳು, ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್‌ಗಳನ್ನು ಆನ್‍ಲೈನ್‌ನಲ್ಲಿ ಮಾರಾಟ ಮಾಡಲು ರಿಲಯನ್ಸ್ ರೀಟೇಲ್ ಸಿದ್ಧವಾಗಿದ್ದು, ಈ ಮೂಲಕ ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್ ಹಾಗೂ ಅಂತರಾಷ್ಟ್ರೀಯ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.
ಅಮೆಜಾನ್, ಫ್ಲಿಪ್‌ಕಾರ್ಟ್‌ಗಳಿಗೆ ಸರಿಸಾಟಿಯಾಗಿ ಆಫರ್‌ಗಳನ್ನೂ ಸಹ ಇದು ನೀಡಲಿದೆಯಂತೆ. ಇತರೆ ಆನ್‌ಲೈನ್ ಮಾರ್ಕೆಟ್ ಪ್ಲೇಸ್‌ಗಳಂತೆ ಹಳೆ ಮಾಡೆಲ್‌ಗಳ ಮೇಲೆ, ಎಕ್ಸ್‌ಕ್ಲೂಸೀವ್ ಮಾಡೆಲ್‌ಗಳ ಮೇಲೆ ಆಗಿಂದಾಗ್ಗೆ ಭಾರಿ ರಿಯಾಯಿತಿಗಳನ್ನು ರಿಲಯನ್ಸ್ ರೀಟೇಲ್ ನೀಡಲಿದೆ ಎಂದು ಇಂಡಸ್ಟ್ರಿ ಎಕ್ಸಿಕ್ಯೂಟಿವ್ ತಿಳಿಸಿದ್ದಾರೆ. ಇತರೆ ಉತ್ಪನ್ನಗಳು ಸಹ ರಿಲಯನ್ಸ್ ಡಿಜಿಟಲ್ ಆಫ್‌ಲೈನ್ ಸ್ಟೋರ್ ಬೆಲೆಗಳಿಗೆ ಸಮಾನವಾಗಿ ಇರುತ್ತವೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ