Select Your Language

Notifications

webdunia
webdunia
webdunia
webdunia

ಕೇಂದ್ರದಿಂದ ಜವಳಿ ಉತ್ಪಾದಕರಿಗೊಂದು ಸಿಹಿಸುದ್ದಿ

ಕೇಂದ್ರದಿಂದ ಜವಳಿ ಉತ್ಪಾದಕರಿಗೊಂದು ಸಿಹಿಸುದ್ದಿ
ನವದೆಹಲಿ , ಗುರುವಾರ, 9 ಆಗಸ್ಟ್ 2018 (15:25 IST)
ನವದೆಹಲಿ : ಕೇಂದ್ರ ಸರಕಾರವು ದೇಶೀಯ ಜವಳಿ ಮತ್ತು ಗಾರ್ಮೆಂಟ್ಸ್ ವಲಯಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ 501 ಜವಳಿ ಮತ್ತು ಅಪಾರಲ್‌ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.20ಕ್ಕೆ ಹೆಚ್ಚಳ ಮಾಡಿದೆ.


ಜವಳಿ ಇಲಾಖೆಯು ಆಮದು ಸುಂಕ ಹೆಚ್ಚಳ ಮಾಡುವಂತೆ ಬೇಡಿಕೆಯನ್ನು ಸಲ್ಲಿಸಿತ್ತು. ಇದನ್ನು ಪರಿಗಣಿಸಿದ ಕೇಂದ್ರ ಸರಕಾರ, ಈ ನಿರ್ಧಾರ ತೆಗೆದುಕೊಂಡಿದೆ. ಸರಕಾರದ ನಿರ್ಧಾರವನ್ನು ಜವಳಿ ಸಚಿವೆ ಸ್ಮೃತಿ ಇರಾನಿ ಸ್ವಾಗತಿಸಿದ್ದಾರೆ. ಈ ನಿರ್ಧಾರದಿಂದ ದೇಶೀಯ ಜವಳಿ ಉತ್ಪಾದಕರಿಗೆ ನಿರಾಳವಾಗಲಿದ್ದು, ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ ಎಂದಿದ್ದಾರೆ.


ಇದರ ಪ್ರಕಾರ ಜವಳಿ ಉತ್ಪನ್ನಗಳ ಆಮದು ಸುಂಕ ಈಗಿನ ಶೇ.10ರಿಂದ ಶೇ.20ಕ್ಕೆ ಏರಿಕೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಳಸಾ ಬಂಡೂರಿ ತೀರ್ಪು 20ಕ್ಕೆ: ಹೋರಾಟಗಾರರ ಮಹತ್ವದ ಸಭೆ