Publish Date: Tue, 07 Aug 2018 (15:45 IST)
Updated Date: Tue, 07 Aug 2018 (15:47 IST)
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು, ಶಿಕ್ಷಕರು ಕಾನೂನು ಬಾಹಿರವಾಗಿ ತಮ್ಮ ತಮ್ಮ ಮನೆ ಕೆಲಸಕ್ಕೆ ಬಳಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕರಿಂದ ಕೃತ್ಯ ನಡೆದಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ಮೋನಮ್ಮ ಹಾಗೂ ದೈಹಿಕ ಶಿಕ್ಷಕ ಚಂದ್ರಶೇಖರ್ ಮಕ್ಕಳನ್ನು ತಮ್ಮ ಮನೆ ಕೆಲಸಕ್ಕೆ ಹಚ್ಚಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮನೆ ಕೆಲಸ, ಬಟ್ಟೆ, ಪಾತ್ರೆ ತೊಳೆಯುವ ಮಕ್ಕಳು ಶಿಕ್ಷಕರ ಮನೆಯಲ್ಲಿ ಕೆಲಸ ಮಾಡುತ್ತಿರುವದನ್ನು ಗಮನಿಸಿದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಕರೆಲ್ಲ ಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಾಲಕರ, ಪೋಷಕರ ಆಕ್ರೋಶ ಹೆಚ್ಚುತ್ತಿದೆ.