Select Your Language

Notifications

webdunia
webdunia
webdunia
webdunia

ಬಡ ಪ್ರಾಣಿ ಜೀವ ಉಳಿಸಿದ ಪುಟಾಣಿಗಳು

ಬಡ ಪ್ರಾಣಿ ಜೀವ ಉಳಿಸಿದ ಪುಟಾಣಿಗಳು
ಚಿಕ್ಕೋಡಿ , ಬುಧವಾರ, 18 ಜುಲೈ 2018 (18:00 IST)
ಕುದುರೆವೊಂದು ಶಾಲಾ ಆವರಣದಲ್ಲಿ ಕಾಲು ಸ್ವಾಧೀನ  ಕಳೆದುಕೊಂಡು ಬಿದ್ದಿತ್ತು. ಅದಕ್ಕೆ ಪುರಸಭೆ ಮುಖ್ಯಾಧಿಕಾರಿ ಮತ್ತು ಶಾಲಾ ಶಿಕ್ಷಕಿ ಹಾಗೂ ಮಕ್ಕಳು ಕುದುರೆಗೆ ನೀರು ಕುಡಿಸಿ ಪ್ರಾಣ ರಕ್ಷಣೆ ಮಾಡಿ  ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ವಿದ್ಯಾನಗರದಲ್ಲಿರುವ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಘಟನೆ ಇದಾಗಿದೆ. ಬೆಳಿಗ್ಗೆ ಮಕ್ಕಳು ಶಾಲೆಗೆ ಆಗಮಿಸಿದಾಗ ಕುದುರೆ ಒದ್ದಾಡುವದನ್ನು ಗಮನಿಸಿದ್ದಾರೆ. ಕುದುರೆ ಶಾಲಾ ಆವರಣದಲ್ಲಿ ಹುಲ್ಲು ಮೇಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಪುಟಾಣಿ ಮಕ್ಕಳು ಕುದುರೆಗೆ ನೀರು ಹಾಕಿ ಮಾನವೀಯತೆ ಮೆರೆದಿದ್ದಾರೆ.

ಸಣ್ಣ ಮಕ್ಕಳು ದೇವರ ಸಮಾನ ಎನ್ನುತ್ತಾರೆ. ಇಲ್ಲಿ ಮಕ್ಕಳು ಬಡ ಕುದುರೆ ಜೀವ ಉಳಿಸಿದ್ದಾರೆ. ನಂತರ ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಗೆಜ್ಜಿ ಅವರಿಗೆ ಕರೆ ಮಾಡಿದಾಗ ಅವರು, ಪಶು ವೈದ್ಯರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದಾರೆ. ಮಕ್ಕಳು ಹಾಗೂ ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಗೆಜ್ಜಿ 
ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಪೇದೆ ಜೊತೆ ಶಾಸಕರ ಬೆಂಬಲಿಗರು ಮಾಡಿದ್ದೇನು?