Publish Date: Fri, 18 May 2018 (15:43 IST)
Updated Date: Fri, 18 May 2018 (15:46 IST)
ಬಿಜೆಪಿಯವರು ನಮ್ಮ ಶಾಸಕರಿಗೆ ತುಂಬಾ ಆಫರ್ ಕೊಟ್ಟಿದ್ದಲ್ಲದೇ ಹಾರ್ಸ್ ಟ್ರೇಡಿಂಗ್ ಮಾಡಲು ತುಂಬಾ ಪ್ರಯತ್ನ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ನಮಗೆ ಏನು ರಕ್ಷಣೆ ಬೇಕಾಗಿಲ್ಲ. ನಮಗೆ ರಕ್ಷಣೆ ಕೊಡಿ ಅಂತಾ ಕೇಳಿರಲಿಲ್ಲ. ಇವರು ಇದೇ ರೀತಿ ಮುಂದುವರೆದರೆ ರಾಜ್ಯದ ಗತಿ ಏನು ರಾಮನಗರ ಎಸ್.ಪಿ.ಯನ್ನು ವರ್ಗಾವಣೆ ಮಾಡಿದ್ದಾರೆ. ಅವರ ಕಾರ್ಯವೈಖರಿಯನ್ನು ಇವತ್ತು ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಾವು ಆದಷ್ಟು ಬೇಗ ನಮ್ಮ ಸಮಿಶ್ರ ಸರ್ಕಾರವನ್ನು ರಚನೆ ಮಾಡ್ತೇವೆ. ಈ ಹಿಂದೆ ಹಸಿರು ಶಾಲು ಹಾಕಿಕೊಂಡು ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಅವರು ಇವತ್ತು ಕೂಡ ಪ್ರಮಾಣ ವಚನವನ್ನ ಸ್ವೀಕಾರ ಮಾಡಿದ್ದಾರೆ ಅಂದು ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದಕ್ಕೆ ನಮ್ಮ ಬಳಿ ಪ್ರಿಂಟಿಂಗ್ ಮಿಷನ್ ಇಲ್ಲಾ ಎಂದಿದ್ದರು ಎಂದು ಲೇವಡಿ ಮಾಡಿದ್ದಾರೆ.
ಅವರಿಗೆ ಹುಟ್ಟ ಗುಣ ಸುಟ್ಟರು ಹೋಗಲ್ಲಾ ಅಂತಾರಲ್ಲಾ, ಅದೇ ರೀತಿ ಬಿಜೆಪಿಯವರ ಗುಣ. ನಮ್ಮ ಶಾಸಕರಿಗೆ ಕೋಟಿ ಕೋಟಿ ಹಣ ಕೊಡ್ತೇವೆ. ಮಂತ್ರಿ ಮಾಡ್ತಾವೆ ಅಂದಿದ್ದಾರೆ. ಬಿಜೆಪಿಯವರು ಈ ಚೇಷ್ಟೆಗಳನ್ನ ಬಿಡಬೇಕು ಯಡಿಯೂರಪ್ಪ ಎಷ್ಟು ಆತುರವಾಗಿ ಸರ್ಕಾರ ರಚನೆ ಮಾಡಿದ್ದಾರೋ ಅಷ್ಟೇ ಬೇಗ ಮನೆಗೆ ಹೋಗ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಗುಡುಗಿದ್ದಾರೆ.