Publish Date: Mon, 06 Aug 2018 (14:26 IST)
Updated Date: Mon, 06 Aug 2018 (14:59 IST)
ಕೋರ್ಟ್ ಪಕ್ಕದಲ್ಲೇ ಇರುವ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಭರ್ಜರಿ ಪಾರ್ಟಿ ನಡೆದಿದೆ. ದಾವಣಗೆರೆಯ ಕೋರ್ಟ್ ಪಕ್ಕದಲ್ಲೇ ಇರುವ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಪಾರ್ಟಿ ನಡೆದಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇತೃತ್ವದಲ್ಲಿ ಗುಂಡು ತುಂಡು ಪಾರ್ಟಿ ಭಲೇ ಜೋರಾಗಿ ನಡೆದಿದೆ. ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಡಿಸಿಸಿ ಬ್ಯಾಂಕ್ ಅದ್ಯಕ್ಷ ಚಂದ್ರಶೇಖರ್ ರನ್ನು ಕೇಳಿದರೆ, ತಮಗೂ ಇದಕ್ಕೂ ಸಂಬಂಧ ಇಲ್ಲಾ, ಆಷಾಢ ಮಾಸ ಹಾಗಾಗಿ ಇಲ್ಲಿ ಬಂದು ಅಧಿಕಾರಿಗಳು ಗುಂಡು- ತುಂಡು ಸೇವಿಸುತ್ತಾರೆ ಎನ್ನುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕ್ಯಾಮೆರಾ ಕಂಡ ತಕ್ಷಣ ಸ್ಥಳದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೊರನಡೆದಿದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಗುಂಡು- ತುಂಡು ತಿನ್ನ ಬಾರದಾ? ಎಂಬುದು ಸಿಬ್ಬಂದಿಯ ಉದ್ದಟತನದ ಪ್ರಶ್ನೆಯಾಗಿದೆ. ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆಗೆ ಕಡಿವಾಣ ಹಾಕುವವರು ಯಾರು ಎಂಬುದೇ ಪ್ರಶ್ನೆಯಾಗಿದೆ.