Select Your Language

Notifications

webdunia
webdunia
webdunia
webdunia

ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಸುಪ್ರಿಂಕೋರ್ಟ್

ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಸುಪ್ರಿಂಕೋರ್ಟ್
ನವದೆಹಲಿ , ಸೋಮವಾರ, 23 ಜುಲೈ 2018 (06:53 IST)
ನವದೆಹಲಿ : ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಮೃತಪಟ್ಟರೆ ಆತನ  ಕುಟುಂಬಕ್ಕೆ ಯಾವುದೇ ಪರಿಹಾರ ಸಿಗದ ಹಿನ್ನಲೆಯಲ್ಲಿ ಇದೀಗ  ಸುಪ್ರಿಂಕೋರ್ಟ್ ಮೃತರಿಗೆ ಸಹಾಯ ಮಾಡಲುಮುಂದಾಗಿದೆ.


ಅದಕ್ಕಾಗಿ ದ್ವಿಚಕ್ರ ಸೇರಿದಂತೆ ಎಲ್ಲಾ ವಾಹನಗಳಿಗೂ  ಥರ್ಡ್​ ಪಾರ್ಟಿ ವಿಮೆ ಕಡ್ಡಾಯ ಎಂದು ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ರಸ್ತೆ ಅಪಘಾತದಲ್ಲಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಮೃತರಾಗುತ್ತಿದ್ದಾರೆ ಎಂದು ಸಮಿತಿ ವರದಿಯನ್ನು ಆಧಾರಿಸಿ ಸುಪ್ರೀಂಕೋರ್ಟ್ ಈ ಆದೇಶವನ್ನು ನೀಡಿದೆ ಎಂದು ತಿಳಿದುಬಂದಿದೆ.


ನಿವೃತ್ತ ನ್ಯಾಯಮೂರ್ತಿ ಕೆ.ಎಸ್​ ರಾಧಕೃಷ್ಣನ್​​ ನೇತೃತ್ವದ ನ ಸಮಿತಿಯೂ ಯಾವುದೇ ಕಂಪನಿಯೂ ತನ್ನ ಗ್ರಾಹಕರಿಗೆ ದ್ವಿಚಕ್ರ ಮತ್ತು ಇತರೆ ವಾಹನಗಳನ್ನು ಮಾರಾಟ ಮಾಡುವಾಗ ಥರ್ಡ್​ ಪಾರ್ಟಿ ವಿಮೆ ಕಡ್ಡಾಯಗೊಳಿಸಬೇಕು. ಅಲ್ಲದೇ ಥರ್ಡ್​ ಪಾರ್ಟಿ ವಿಮೆಯನ್ನು ಒಂದು ವರ್ಷದ ಬದಲಿಗೆ, 3 ಮತ್ತು 5 ವರ್ಷಕ್ಕೆ ಮಾಡಿಸಬೇಕು ಎಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಬಿ. ಕೋಳಿವಾಡ ವಿರುದ್ಧ ಅರಣ್ಯ ಸಚಿವ ಗರಂ