Publish Date: Sat, 21 Jul 2018 (15:56 IST)
Updated Date: Sat, 21 Jul 2018 (15:59 IST)
ನವದೆಹಲಿ : ಕಣ್ಸನ್ನೆಯಿಂದಲೇ ಫೆಮಸ್ ಆದ ನಟಿ ಪ್ರಿಯಾ ವಾರಿಯರ್ ಈಗ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಕಣ್ಸನ್ನೆ ಮಾಡಿದರ ಬಗ್ಗೆ ಸುದ್ದಿ ಕೇಳಿ ತುಂಬಾ ಸಂತೋಷಗೊಂಡಿದ್ದರೆ.
ಈ ಹಿಂದೆ ಸಿನಿಮಾವೊಂದರಲ್ಲಿ ನಟಿ ಪ್ರಿಯಾ ವಾರಿಯರ್ ಕಣ್ಸನ್ನೆ ಮಾಡುವುದರ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದೇರೀತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರದಂದು ತಮ್ಮ ಭಾಷಣ ಮುಗಿದ ನಂತರ ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಕಣ್ಸನ್ನೆ ಮಾಡಿದ್ದು ಈಗ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಈಗ ಇದಕ್ಕೆ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್ ಪ್ರತಿಕ್ರಿಯೆ ನೀಡಿದ್ದಾರೆ.
‘ನಾನು ಕಾಲೇಜ್ ನಿಂದ ಹಿಂದಿರುಗಿದ ನಂತರ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ನಮ್ಮ ಪ್ರಧಾನಮಂತ್ರಿ ಮೋದಿ ಯವರಿಗೆ ಕಣ್ಸನ್ನೆ ಮಾಡಿದರ ಬಗ್ಗೆ ಸುದ್ದಿಯನ್ನು ನೋಡಿದೆ. ಅವರು ಕಣ್ಸನ್ನೆ ಮೂಲಕ ಸ್ವಾಗತಿಸಿದ್ದು ನಿಜಕ್ಕೂ ಪ್ರೀತಿಯ ಸೂಚಕ, ಚಿತ್ರವೊಂದರಲ್ಲಿ ನಾನು ಶುರು ಮಾಡಿದ ಈ ಗುರುತು ಎನ್ನುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ