Publish Date: Sat, 21 Jul 2018 (08:56 IST)
Updated Date: Sat, 21 Jul 2018 (08:59 IST)
ನವದೆಹಲಿ: ನಿನ್ನೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕರ್ನಾಟಕ ಬಿಜೆಪಿ ಧನ್ಯವಾದ ಸಲ್ಲಿಸಿದೆ!
ಟ್ವಿಟರ್ ಮೂಲಕ ಬಿಜೆಪಿಯ ಕರ್ನಾಟಕ ಘಟಕ ಧನ್ಯವಾದ ಸಲ್ಲಿಸಿದೆ. ಸಂಸತ್ತಿನಲ್ಲಿ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಅಪ್ಪಿಕೊಂಡಿದ್ದರು. ಅಷ್ಟೇ ಅಲ್ಲ, ನನ್ನ ಕಣ್ಣಲ್ಲಿ ಕಣ್ಣಿಟ್ಟು ಪ್ರಧಾನಿ ಮೋದಿಗೆ ಮಾತನಾಡಲಾಗದು ಎಂದಾಗ ಮೋದಿ ಜೋರಾಗಿ ನಕ್ಕರು. ಬಳಿಕ ಪ್ರಧಾನಿ ಆಗಾಗ ವಿದೇಶಗಳಿಗೆ ಹೋಗುವ ವಿಚಾರವನ್ನು ಪ್ರಸ್ತಾಪಿಸಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಾರೆ. ಹಿಂದಿಯಲ್ಲಿ ಬಾಹರ್ ಎನ್ನುವ ಬದಲು ಬಾರ್ ಚಲ್ತೇ ಹೈ ಎಂದು ನಗೆ ಪಾಟಲಿಗೀಡಾದರು.
ಈ ವಿಡಿಯೋಗಳನ್ನು ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿರುವ ಬಿಜೆಪಿ ಇಷ್ಟೊಂದು ಮನರಂಜಿಸಿದ್ದಕ್ಕೆ ಧನ್ಯವಾದಗಳು ಎಂದಿದೆ. ಇನ್ನು ಬಿಜೆಪಿ ನಾಯಕಿ, ನಿರ್ಮಾಪಕಿ ಶಿಲ್ಪಾ ಗಣೇಶ್ ಮೊದಲು ನಿಮ್ಮ ಪಕ್ಕದಲ್ಲಿ ಕುಳಿತಿರುವ ಸಂಸದರನ್ನು ನೋಡಿ ರಾಹುಲ್ ಜೀ. ಅವರಿಗೆ ನಿಮ್ಮ ಭಾಷಣ ಕೇಳಿ ನಗು ಬಂದರೂ ನಗಲಾರದೆ ಕೂತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.