Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯನ್ನು ಹೊಗಳಿದ ಶಿವಸೇನೆ

ರಾಹುಲ್ ಗಾಂಧಿಯನ್ನು ಹೊಗಳಿದ ಶಿವಸೇನೆ
ನವದೆಹಲಿ , ಶನಿವಾರ, 21 ಜುಲೈ 2018 (16:03 IST)
ನವದೆಹಲಿ : ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಗೊತ್ತುವಳಿ ಚರ್ಚೆಯ ಸದಸನಕ್ಕೆ  ಗೈರು ಹಾಜರಾಗಿರುವ  ಶಿವಸೇನೆ ಇದೀಗ ನಿನ್ನೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಭಾಷಣದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದೆ.


ಈ ಕುರಿತು ಮಾತನಾಡಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ‘ರಾಹುಲ್ ಅವರ ನಿನ್ನೆಯ ಭಾಷಣ ನಿಜಕ್ಕೂ ಅದ್ಭುತವಾಗಿತ್ತು. ತಮ್ಮ ಭಾಷಣದಲ್ಲಿ ರಾಹುಲ್ ಪ್ರಸ್ತಾಪಸಿದ ಅಂಶಗಳು ಖಂಡಿತ ದೇಶದ ಜನರನ್ನು ಮುಟ್ಟಿವೆ’ ಎಂದು ರಾವತ್  ತಿಳಿಸಿದ್ದಾರೆ.


 ಹಾಗೇ ‘ರಾಹುಲ್ ರಾಜಕೀಯವಾಗಿ ಪಳಗುತ್ತಿದ್ದು, ಇದು ಅಧಿಕಾರದಲ್ಲಿರುವವರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ತಮ್ಮ ಭಾಷಣದ ಬಳಿಕ ರಾಹುಲ್ ಪ್ರಧಾನಿ ಅವರನ್ನು ಅಪ್ಪಿಕೊಂಡಿರುವುದು ಜನತಂತ್ರದ ವಿಜಯ. ರಾಹುಲ್ ಅಪ್ಪುಗೆಯ ಬಳಿಕ ಮೋದಿ ಆಘಾತದಲ್ಲಿದ್ದರು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಕಣ್ಸನ್ನೆ ಕಂಡು ಕಣ್ಸನ್ನೆ ಬೆಡಗಿ ಪ್ರಿಯಾ ಹೇಳಿದ್ದೇನು?