Publish Date: Mon, 06 Aug 2018 (14:01 IST)
Updated Date: Mon, 06 Aug 2018 (14:06 IST)
ಪಂಜಾಬ್: ಪತ್ನಿ ಅಕ್ರಮ ಸಂಬಂಧ ತಿಳಿದು ಬೇಸತ್ತ ಪತಿ ವಿದೇಶದಿಂದ ಮರಳಿ ಬಂದವನೇ ಬೆಂಕಿ ಹಚ್ಚಿ ಪತ್ನಿ ಹಾಗೂ ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಲಸಂಘಿಯಾನ್ ನಲ್ಲಿ ನಡೆದಿದೆ.
ಕುಲ್ವಿಂದರ್ ಸಿಂಗ್ ಹಾಗೂ ಮನ್‍ದೀಪ್ ಕೌರ್ ಜೊತೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರೂ ಮಕ್ಕಳು ಕೂಡ ಇದ್ದಾರೆ. ಮನದೀಪ್ ಕೌರ್ ಗೆ ಅದೇ ನಗರದ ಗುರುಪ್ರೀತ್ ಸಿಂಗ್ ಅಲಿಯಾಸ್ ಸನ್ನಿ ಎಂಬಾತನ ಪರಿಚಯವಾಗಿ ಪರಿಚಯ ಪ್ರಣಯಕ್ಕೆ ತಿರುಗಿತು. ಇವರಿಬ್ಬರ ಪ್ರಣಯದಾಟ ಮೊಬೈಲಿನಲ್ಲಿ ವಿಡಿಯೋ ಆಗಿದೆ.
ಕೆಲಸದ ಉದ್ದೇಶಕ್ಕಾಗಿ ಜೋರ್ಡಾನ್ ನಲ್ಲಿದ್ದ ಕುಲ್ವಿಂದರ್ ಗೆ ಅಪರಿಚಿರಾರು ಫೋನ್ ಮಾಡಿ ನಿಮ್ಮ ಪತ್ನಿಗೆ ಅನೈತಿಕ ಸಂಬಂಧವಿದೆ. ಇದರ ಕುರಿತಾದ ವೀಡಿಯೋ ಕೂಡಾ ಇದೆ. ಇದನ್ನೇ ಮುಂದಿಟ್ಟುಕೊಂಡು ಸನ್ನಿ, ಆತನ ತಾಯಿ ಹಾಗೂ ಇನ್ನಿಬ್ಬರು ನಿಮ್ಮ ಪತ್ನಿಯನ್ನು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸಿಟ್ಟಾದ ಪತಿ ಯಾರಿಗೂ ಮಾಹಿತಿ ನೀಡದೇ ವಿದೇಶದಿಂದ ಬಂದಿದ್ದಾನೆ. ಈ ಕುರಿ ಗಂಡ ಹೆಂಡತಿ ಮಧ್ಯೆ ಜಗಳವಾಗಿದೆ. ಕೊನೆಗೆ ಇದು ಸಾವಿನ ಮೂಲಕ ಅಂತ್ಯವಾಗಿದೆ.
ಕುಲ್ವಿಂದರ್ ಹಾಗೂ 5 ವರ್ಷದ ಪುತ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ವರ್ಷದ ಮಗಳು ಕಪುರ್ತಲ ಆಸ್ಪತ್ರೆಯಲ್ಲಿ ಸಾವನ್ನಪಿದ್ದಾಳೆ. ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದರೂ, ಪೊಲೀಸರಿಹಗರ ಮಾಹಿತಿ ನೀಡಿದ ಬಳಿಕ ಮನ್‍ದೀಪ್ ಕೂಡಾ ಸಾವನ್ನಪ್ಪಿದ್ದಾಳೆ .