Publish Date: Sat, 04 Aug 2018 (12:50 IST)
Updated Date: Sat, 04 Aug 2018 (12:57 IST)
ಅಹಮದಾಬಾದ್: ಪ್ರಿಯತಮೆ ಇನ್ನೊಬ್ಬರ ಕಣ್ಣಿಗೆ ಸುಂದರವಾಗಿ ಕಾಣಬಾರದೆಂದು ಹುಚ್ಚು ಪ್ರೇಮಿಯೊಬ್ಬ ಅವಳ ಮುಂದಿನ ಎರಡು ಹಲ್ಲುಗಳ ಕಿತ್ತ ಘಟನೆಯೊಂದು ನಡೆದಿದೆ.
ಗೀತಾಬೆನ್ (55) ಎಂಬಾಕೆ ಆಟೋ ಚಾಲಕನ ಪ್ರೀತಿಗೆ ಬಿದ್ದು ಗಂಡ, ಮಕ್ಕಳನ್ನು ತೊರೆದು ಆತನ ಜತೆ ವಾಸಿಸುತ್ತಿದ್ದಳು. ಇನ್ನು ಇತನೂ ಕೂಡ ಏನು ಕಡಿಮೆ ಇರಲಿಲ್ಲ. ಆಕೆಯ ಪ್ರಿಯಕರ (57) ಪ್ರಿಯತಮೆಗಾಗಿ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದ. ಮೊದ ಮೊದಲು ಇಬ್ಬರೂ ತುಂಬಾ ಚೆನ್ನಾಗಿದ್ದರು. ಇತ್ತೀಚೆಗೆ ಯಾಕೋ ಪ್ರಿಯಕರನ ಮನಸ್ಸಿನಲ್ಲಿ ಅನುಮಾನದ ಭೂತ ಮನೆಮಾಡಿಕೊಂಡಿತು. ಅವಳ ಮೇಲಿನ ಅತಿಯಾದ ಪ್ರೀತಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು. ಗೀತಾಬೆನ್ ಗೆ ಸಾಕಷ್ಟು ಚಿತ್ರಹಿಂಸೆ ನೀಡಲು ಶುರುಮಾಡಿದ್ದ.
ತನ್ನ ಬಿಟ್ಟು ಬೇರೆ ಯಾವ ಗಂಡಸೂ ಅಚಳತ್ತ ಆಕರ್ಷಿತರಾಗಬಾರದು ಎಂದು ಯೋಚಿಸಿ ಆಕೆಯ ಮುಂದಿನ ಎರಡು ಹಲ್ಲುಗಳನ್ನು ಕೀಳಿಸಿ ಅವಳನ್ನು ವಿರೂಪಗೊಳಿಸಿದ್ದಾನೆ. ಎಲ್ಲೂ ಹೋಗಬಾರದು ಎಂದು ತಾಕೀತು ಮಾಡಿದ್ದಾನೆ. ಇದರಿಂದ ಬೇಸತ್ತ ಆಕೆ ಜೀವನದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿದ್ದಳು.
ಆತನ ಜತೆ ಆಟೋರಿಕ್ಷಾದಲ್ಲಿ ಹೋಗುವಾಗ ಬೇಸತ್ತ ಮಹಿಳೆ ಆಟೋದಿಂದ ಕಳಕ್ಕೆ ಹಾರಿದ್ದಾಳೆ. ದಾರಿಹೋಕರೊಬ್ಬರು ಆಕೆಯನ್ನು ರಕ್ಷಿಸಿದ್ದಾರೆ. ಆಪ್ತ ಸಮಾಲೋಚನಯ ನಂತರ ಗೀತಾಬೆನ್ ತನ್ನ ಸಂಕಷ್ಟವನ್ನು ತೋಡಿಕೊಂಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ