Select Your Language

Notifications

webdunia
webdunia
webdunia
webdunia

ಅಬುದಾಬಿ ಲಾಟರಿಯಲ್ಲಿ 10 ಮಿಲಿಯನ್ ದಿರ್ಹಾಮ್ ಗೆದ್ದ ಕೇರಳದ ಯೊಹಾನನ್ ಸಿಮೊನ್

ಅಬುದಾಬಿ ಲಾಟರಿಯಲ್ಲಿ 10 ಮಿಲಿಯನ್ ದಿರ್ಹಾಮ್ ಗೆದ್ದ ಕೇರಳದ ಯೊಹಾನನ್ ಸಿಮೊನ್
ಅಬುಧಾಬಿ , ಶನಿವಾರ, 4 ಆಗಸ್ಟ್ 2018 (12:28 IST)
ಅಬುದಾಬಿ: ಅಬುದಾಬಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಾ ಮಾಡಲಾದ ಲಾಟರಿಯಲ್ಲಿ ಕೇರಳದ ವಳಪಳ್ಳಿ ಯೊಹಾನನ್ ಸಿಮೊನ್ ಅವರು ಬರೋಬ್ಬರಿ 10 ಮಿಲಿಯನ್ ದಿರ್ಹಾಮ್ ಗೆದ್ದಿದ್ದಾರೆ.


ಶುಕ್ರವಾರ ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ನಡೆದ ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ ಈ ಭಾರಿ ಮೊತ್ತದ ಹಣವನ್ನು ಇವರು ಗೆದ್ದುಕೊಂಡಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ, ಟಾಪ್ 10 ವಿಜೇತರ ಪಟ್ಟಿಯಲ್ಲಿ ತೈಸಿರ್ ನಸರ್ ಸಾಬಿಹ್ ಎಂಬ ಸಿರಿಯಾದ ವ್ಯಕ್ತಿ ಹೊರತುಪಡಿಸಿ ಉಳಿದವರೆಲ್ಲರೂ ಭಾರತದವರೇ ಆಗಿದ್ದಾರೆ.


ಲಾಟರಿಯ ಕುರಿತು ತಮಗೆ ಕರೆ ಬಂದಾಗ ಆರಂಭದಲ್ಲಿ ಅದು ಹುಸಿ ಕರೆ ಎಂದೇ ಭಾವಿಸಿದ್ದಾಗಿ ಸಿಮೊನ್ ಹೇಳಿದ್ದಾರೆ. ಯುಎಇಯಲ್ಲಿ 13 ವರ್ಷ ಕಳೆದ ಬಳಿಕ ದೇವರು ಆಶೀರ್ವದಿಸಿದ್ದಾನೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮೂವರು ಮಕ್ಕಳ ತಂದೆಯಾಗಿರುವ ಅವರು ಕೆಲವು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ಕೇರಳದಲ್ಲಿರುವ ಸಂಸ್ಥೆಯೊಂದಕ್ಕೆ ಈ ಹಣದ ಭಾಗವನ್ನು ದೇಣಿಗೆಯಾಗಿ ನೀಡಲು ಅವರು ಉದ್ದೇಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮದೇ ತಪ್ಪಿನಿಂದ ಬಿಜೆಪಿ ಸೋತಿತು: ಬಿಎಸ್ ವೈ