Select Your Language

Notifications

webdunia
webdunia
webdunia
webdunia

ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ ನಟ ಮೋಹನ್ ಲಾಲ್ ಆಯ್ಕೆ

ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ ನಟ ಮೋಹನ್ ಲಾಲ್ ಆಯ್ಕೆ
ಕೇರಳ , ಮಂಗಳವಾರ, 12 ಜೂನ್ 2018 (12:41 IST)
ಕೇರಳ : ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ  ಆಯ್ಕೆಯಾಗಿದ್ದಾರೆ.


ನಟ ಮಮ್ಮುಟ್ಟಿ ಅವರು ತಮ್ಮ ಸ್ಥಾನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲೇ ಈ ಸ್ಥಾನಕ್ಕೆ ಹಲವಾರು ನಟರು ಹಾಗು ಸಿನಿ ಗಣ್ಯರು ಶುಕ್ರವಾರ ನಾಮನಿರ್ದೇಶನ ಮಾಡಿದ್ದಾರೆ. ನಂತರ ಆಯ್ಕೆ ಪ್ರಕ್ರಿಯೆಯಲ್ಲಿ ನಟ ಮೋಹನ್ ಲಾಲ್ ಅವರನ್ನು ಆಯ್ಕೆ ಮಾಡಿದ್ದು, ಈ ಮೂಲಕ ನಟ ಮೋಹನ್ ಲಾಲ್ ಅವರು ಮಲಯಾಳಂ ಮೂವೀ ಆಕ್ಟರ್ಸ್ (ಎಎಂಎಂಎ) ನ ಅಸೋಸಿಯೇಷನ್ ನ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.


ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ  ಎಡೆವೆಲ ಬಾಬು ಅವರನ್ನು ಹಾಗೂ ಖಜಾಂಚಿಯಾಗಿ ಹಾಸ್ಯನಟ ಮತ್ತು ಪಾತ್ರಧಾರಿ ಜಗದೀಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಗೆ ಬರಲು ಈ ಸಿನಿಮಾ ಕಾರಣವಂತೆ!