Select Your Language

Notifications

webdunia
webdunia
webdunia
webdunia

ಕನ್ನಡಿಗರ ನಿರ್ಧಾರವನ್ನು ಖಂಡಿಸಿದ ತಮಿಳು ನಟ ವಿಶಾಲ್

ಕನ್ನಡಿಗರ ನಿರ್ಧಾರವನ್ನು ಖಂಡಿಸಿದ ತಮಿಳು ನಟ ವಿಶಾಲ್
ಚೆನ್ನೈ , ಶನಿವಾರ, 2 ಜೂನ್ 2018 (15:32 IST)
ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗಿರುವುದಕ್ಕೆ ಇದೀಗ ತಮಿಳು ನಟ ವಿಶಾಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಜನೀಕಾಂತ್ ಅವರು ಕಾವೇರಿ ವಿವಾದದಲ್ಲಿ ಕರ್ನಾಟಕದ ವಿರುದ್ಧವಾಗಿ ಮಾತನಾಡಿದಕ್ಕೆ ಆಕ್ರೋಶಗೊಂಡ ಕನ್ನಡಿಗರು ರಜನಿಕಾಂತ್ ಚಿತ್ರವನ್ನು ಬ್ಯಾನ್ ಮಾಡಲು ನಿರ್ಧರಿಸಿದೆ. ಆದಕಾರಣ ಇದೀಗ ಬಿಡುಗಡೆಗೆ ಸಿದ್ದವಾದ ರಜನೀಕಾಂತ್ ಅಭಿನಯದ ಕಾಲಾ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದು ಎಂದು ರಾಜ್ಯದ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.


ಕರ್ನಾಟಕದಲ್ಲಿ ಕಾಲಾ ನಿಷೇಧ ಮಾಡಿರುವುದನ್ನು ಖಂಡಿಸಿದ ತಮಿಳು ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷನಾಗಿರುವ ನಟ ವಿಶಾಲ್ ಅವರು ಕಾಲಾ ಚಿತ್ರವನ್ನ ರಿಲೀಸ್ ಮಾಡಬೇಕು. ಹೀಗೆ ಮಾಡುತ್ತಿರುವುದು ಸರಿಯಿಲ್ಲ ಎಂದು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಗೆ ಸಾರ್ವಜನಿಕ ಸ್ಥಳದಲ್ಲಿ ಥಳಿಸಿದರೆ 5 ಲಕ್ಷ ರೂ. ಬಹುಮಾನ!