ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿನಯಿಸಿದ ಕಾಲಾ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದೆಂದು ಪ್ರತಿಭಟನೆ ಮಾಡುತ್ತಿರುವುದು ಒಂದುಕಡೆಯಾದರೆ ಇನ್ನೊಂದು ಕಡೆ ಮುಂಬೈನಲ್ಲಿ ಪತ್ರಕರ್ತರೊಬ್ಬರು ಈ ಚಿತ್ರದ ಕುರಿತಾಗಿ ರಜನೀಕಾಂತ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿನಯಿಸಿದ ಕಾಲಾ ಚಿತ್ರ ಜೂನ್ 7 ಕ್ಕೆ ವಿಶ್ವದಾದ್ಯಂತ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ. ಆದರೆ ಇದೀಗ ಮುಂಬೈ ಮೂಲದ ಪತ್ರಕರ್ತ ಜವಹಾರ್ ನಡಾರ್ ಎಂಬುವವರು ರಜನೀಕಾಂತ್ ಅವರು ತನ್ನ ಬಳಿ ಕ್ಷಮೆ ಕೇಳಬೇಕು ಅಂತ 36 ಗಂಟೆಗಳ ಡೆಡ್ ಲೈನ್ ಕೊಟ್ಟಿದ್ದಾರೆ. ಒಂದು ವೇಳೆ ರಜಿನಿ ಲಿಖಿತ ರೂಪದಲ್ಲಿ ಕ್ಷಮೆ ಕೇಳಲಿಲ್ಲ ಅಂತಂದ್ರೆ ಅವರ ವಿರುದ್ಧ ಬರೋಬ್ಬರಿ 101 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸೋ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಕಾರಣವೆನೆಂದರೆ ಕಾಲ ಸಿನಿಮಾದಲ್ಲಿ ರಜಿನಿ ಅಭಿನಿಯಿಸಿರೋ ಪಾತ್ರ ಅವರ ತಂದೆ ದಿವಂಗತ ಎಸ್. ತಿರವಿಯಾಮ್ ನಡಾರ್ ಜೀವನ ಚರಿತ್ರೆಯಂತೆ. ಚಿತ್ರದಲ್ಲಿ ತಮ್ಮ ತಂದೆಯನ್ನು ನೆಗೆಟಿವ್ ಆಗಿ ಬಿಂಬಿಸಲಾಗಿದ್ದು, ಧನಿಕರು ಮತ್ತು ಮೇಲ್ಜಾತಿಯವರನ್ನು ಸೆಳೆಯಲು ಈ ರೀತಿ ಚಿತ್ರ ತಯಾರಿಸಿದ್ದಾರೆ. ಇದರಿಂದ ತನ್ನ ತಂದೆಯವರ ತೇಜೋವಧೆಯಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ರಜಿನಿಕಾಂತ್ ಅವರ ಆಪ್ತರೊಬ್ಬರು ಅವರು ನೋಟಿಸ್ ಸಿಕ್ಕ ತಕ್ಷಣ ಅದಕ್ಕೆ ಪ್ರತಿಕ್ರಿಯೆ ನೀಡೋದಾಗಿ ತಿಳಿಸಿದ್ದಾರೆ. ಅಲ್ಲದೇ, ಕಾಲಾ ಸಿನಿಮಾ ಯಾವುದೇ ಕಾರಣಕ್ಕೆ ನಿಮ್ಮ ತಂದೆಯವರ ಬಗ್ಗೆ ಮಾಡಿರೋದಲ್ಲ ಅಂತ ಹೇಳಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ