Daily Horoscope

Select Your Language

Notifications

webdunia
webdunia
webdunia
webdunia

ಅಂತರ್ಜಾತಿ ವಿವಾಹವಾದ ಪ್ರೇಮಿಗಳು

ಅಂತರ್ಜಾತಿ ವಿವಾಹ
ಅವರಿಬ್ಬರ ಪ್ರೀತಿಗೆ ಮನೆಯವರ ವಿರೋಧ ಇತ್ತು. ಆದರೆ ವಿರೋಧದ ನಡುವೆಯೂ ಪ್ರೇಮಿಗಳಿಬ್ಬರು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡ ಘಟನೆ ನಡೆದಿದೆ.

ಧಾರವಾಡ ಜಿಲ್ಲೆಯಲ್ಲಿ ಅಂತರ್ಜಾತಿ ಮದುವೆಯೊಂದು ನಡೆದಿದೆ. ಧಾರವಾಡ ಜಿಲ್ಲೆಯ ಸುಳ್ಳ ಗ್ರಾಮದ  ಬಸವರಾಜ್ ದೇಸಾಯಿ ಎಂಬ (27) ವರ್ಷದ ಯುವಕ ಮಹಾರಾಷ್ಟ್ರ ಮೂಲದ ಮೋನಿಕಾ ಎಂಬ (24) ವರ್ಷದ ಯುವತಿಯನ್ನ ಪ್ರೀತಿಸಿ ಮದುವೆ ಮಾಡಿಕೊಂಡವನು. ಇವರಿಬ್ಬರೂ ಕಳೆದ 4 ವರ್ಷಗಳಿಂದ ಪ್ರೀತಿಸುತಿದ್ದರು.

ಜಾತಿ ಅಡ್ಡ ಬಂದ‌‌ ಕಾರಣ ಇವರ ಮದುವೆಗೆ  ಅಡಚಣೆಯಾಗಿತ್ತು. ಯುವಕ‌ ಲಿಂಗಾಯತ ಜಾತಿಗೆ ಹಾಗೂ ಯುವತಿ ಪರಿಶಿಷ್ಟ ಜಾತಿಗೆ‌ ಸೇರಿದ್ದ ಕಾರಣ, ಯುವತಿ‌ ಮನೆಯವರು ಇದಕ್ಕೆ ವಿರೋಧ ಮಾಡುತಿದ್ದರು. ಈ ಹಿನ್ನೆಲೆ ಯುವಕ ತನ್ನ ಕುಟುಂಬ ಹಾಗೂ ದಲಿತ ಸಂಘಟನೆಯ ಮುಖೇನ  ಅವರ ಸಮ್ಮುಖದಲ್ಲೇ ಧಾರವಾಡ ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಹೂವಿನ ಹಾರ ಬದಲಿಸುವ ಮೂಲಕ ನವ ಜೀವನಕ್ಕೆ ಕಾಲಿಟ್ಟರು. ಯುವತಿ ಸದ್ಯ ಪುಣೆಯಲ್ಲಿ ಎಂ.ಎಸ್.ಡಬ್ಲು ವಿದ್ಯಾಭ್ಯಾಸ ಮಾಡುತ್ತಿದ್ದು, ಯುವಕ ಸದ್ಯ ಪುಣೆಯಲ್ಲಿ ಖಾಸಗಿ ಸಂಸ್ಥೆಯಲ್ಲಿ ನೆಟವರ್ಕಿಂಗ್ ಕೆಲಸ  ಮಾಡುತ್ತಿದ್ದಾನೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಅವಿಶ್ವಾಸ ಮತದಲ್ಲಿ ತನ್ನ ಬೆಂಬಲಕ್ಕೆ ನಿಂತ ಕಾಂಗ್ರೆಸ್ ವಿರುದ್ಧವೇ ಟಿಡಿಪಿ ಸಂಸದನ ವಾಗ್ದಾಳಿ