ಚೆನ್ನೈ: ಕಳೆದ ವರ್ಷ ಇದೇ ದಿನ ತಮಿಳುನಾಡು ಅಲ್ಲೋಲಕಲ್ಲೋವಾಗಿತ್ತು. ಸಿಎಂ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷ ಕಳೆದಿದೆ.
 
ಸೆಪ್ಟೆಂಬರ್ 22 ರಂದು ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ  ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದರು. ಆದರೆ ಅವರ ಸಾವಿನ ದಿನ ತಮಿಳುನಾಡು ಅಕ್ಷರಶಃ ರಣರಂಗವಾಗಿತ್ತು.
									
			
			 
 			
 
 			
					
			        							
								
																	ಅಮ್ಮನನ್ನು ಕಳೆದುಕೊಂಡ ತಮಿಳುನಾಡು ಶೋಕದ ಮಡುವಿನಲ್ಲಿ ಮುಳುಗಿತ್ತು. ತಮಿಳುನಾಡಿನ ಮೆಚ್ಚಿನ ಮುಖ್ಯಮಂತ್ರಿಯನ್ನು ಮರೀನಾ ಬೀಚ್ ಬಳಿ ಅಂತಿಮ ಸಂಸ್ಕಾರ ಮಾಡಲಾಗಿತ್ತು.
									
										
								
																	ಇಂದು ಅವರ ಪುಣ್ಯ ತಿಥಿ ಹಿನ್ನಲೆಯಲ್ಲಿ ಜನಸಾಗರವೇ ಸಮಾಧಿಯತ್ತ ಹರಿದುಬರುತ್ತಿದೆ. ಜಯಲಲಿತಾ ಪುಣ್ಯತಿಥಿ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಸಮಾಧಿ ಬಳಿ ಪೂಜೆ ಮಾಡುತ್ತಿದ್ದಾರೆ. ತಮಿಳುನಾಡು ಸಿಎಂ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನೀರ್ ಸೆಲ್ವಂ, ಶಶಿಕಲಾ ನಟರಾಜನ್ ಬಣದ ಟಿಟಿವಿ  ದಿನಕರನ್,  ಜಯಾ ಸೋದರ ಸಂಬಂಧಿ ದೀಪಾ ಜಯಕುಮಾರ್ ಸೇರಿದಂತೆ ಅನೇಕ ಬೆಂಬಲಿಗರು, ಅಭಿಮಾನಿಗಳು ಜಯಾ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ