Publish Date: Sat, 18 Nov 2017 (09:29 IST)
Updated Date: Sat, 18 Nov 2017 (09:33 IST)
ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರಿಗೆ ಸೇರಿದ ಪೊಯೆಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ರಾತ್ರೋ ರಾತ್ರಿ ದಾಳಿ ನಡೆಸಿದ್ದು, ತಮಿಳುನಾಡಿನಾದ್ಯಂತ ಜಯಯಲಿತಾ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ರಾತ್ರಿ 10 ಗಂಟೆ ವೇಳೆಗೆ ದಿಡೀರ್ ದಾಳಿ ನಡೆಸಿದ ಐಟಿ ಅಧಿಕಾರಿಗಳು ಸತತ ಐದು ಗಂಟೆಗಳ ಕಾಲ ತಪಾಸಣೆ ನಡೆಸಿ ಇದೀಗ ಕೆಲವೇ ಕ್ಷಣಗಳ ಮೊದಲು ಸ್ಥಳದಿಂದ ತೆರಳಿದ್ದಾರೆ.
ಜಯಲಲಿತಾ ನಿವಾಸದಿಂದ ಒಂದು ಲ್ಯಾಪ್ ಟಾಪ್, 4-5 ಪೆನ್ ಡ್ರೈವ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಜಯಲಲಿತಾರ ಆಪ್ತರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ