Publish Date: Tue, 05 Dec 2017 (09:44 IST)
Updated Date: Tue, 05 Dec 2017 (10:00 IST)
ಚೆನ್ನೈ: ಜೆ. ಜಯಲಲಿತಾ ನಿಧನದ ಮೊದಲ ಪುಣ್ಯತಿಥಿ ಹಿನ್ನೆಲೆ ಜಯಲಲಿತಾ ಸಮಾಧಿಯತ್ತ ಜನಸಮೂಹವೇ ಹರಿದುಬರುತ್ತಿವೆ.
ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಸಮಾಧಿಯತ್ತ ಸಾಕಷ್ಟು ಜನ ಸೇರಿ ತಮ್ಮ ಮೆಚ್ಚಿನ ನಾಯಕಿಗೆ ಗೌರವ ಅರ್ಪಿಸುತ್ತಿದ್ದಾರೆ.
ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರ ಮೊದಲ ಪುಣ್ಯತಿಥಿ ಸಲುವಾಗಿ ಚೆನ್ನೈ ನ ಮರೀನಾ ಬೀಚ್ ನಲ್ಲಿರುವ ಅವರ ಸಮಾಧಿಯತ್ತ ಜನಸಾಗರವೇ ಹರಿದುಬಂದಿದೆ. ತಮಿಳುನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಜನರು ಗೌರವ ಸಲ್ಲಿಸುತ್ತಿದ್ದಾರೆ.
ಎಐಎಡಿಎಂಕೆ ಮತ್ತು ಶಶಿಕಲಾ ಬಣಗಳಿಂದ ಪ್ರತ್ಯೇಕ ರಾಲಿ ಆಯೋಜಿಸಿದೆ. ಇವೆರೆಡೂ ಬಣಗಳು ಮೌನ ಮೆರವಣಿಗೆ ಆಯೋಜಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.