Publish Date: Sat, 18 Nov 2017 (10:02 IST)
Updated Date: Sat, 18 Nov 2017 (10:06 IST)
ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಬೆಡ್ ರೂಂನ್ನು ಜಾಲಾಡಿದ್ದಾರೆ.
ಇತ್ತೀಚೆಗೆ ಶಶಿಕಲಾ ನಟರಾಜನ್ ಗೆ ಸಂಬಂಧಿಸಿದ ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳಿಗೆ ಸಾಕಷ್ಟು ಬೇನಾಮಿ ಆಸ್ತಿ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಜಯಲಲಿತಾರ ಪೊಯೆಸ್ ಗಾರ್ಡನ್ ನಿವಾಸದಲ್ಲಿ ಶಶಿಕಲಾ ಉಳಿದುಕೊಳ್ಳುತ್ತಿದ್ದ ಕೊಠಡಿಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿದ್ದಾರೆ.
ಶಶಿಕಲಾರ ಎರಡು ಕೊಠಡಿಗಳು ಹಾಗೂ ಎಐಎಡಿಎಂಕೆ ಕಾರ್ಯದರ್ಶಿ ಪೂಂಗುಂಡ್ರನ್ ಗೆ ಸೇರಿದ ಒಂದು ಕೊಠಡಿ ಸೇರಿದಂತೆ ಮೂರು ಕೊಠಡಿಗಳಲ್ಲಿ ಐಟಿ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ. ಜಯಲಲಿತಾ ತೀರಿಕೊಂಡ ಬಳಿಕವೂ ಶಶಿಕಲಾ ಪೊಯೆಸ್ ಗಾರ್ಡನ್ ನ ಈ ಕೊಠಡಿಯಲ್ಲಿ ನೆಲೆಸಿದ್ದರು. ಈ ಹಿನ್ನಲೆಯಲ್ಲಿ ಈ ದಾಳಿ ಶಶಿಕಲಾರನ್ನು ಟಾರ್ಗೆಟ್ ಮಾಡಿ ಮಾಡಲಾಗಿತ್ತು ಎಂಬುದು ಸ್ಪಷ್ಟವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ