Publish Date: Sat, 18 Nov 2017 (10:23 IST)
Updated Date: Sat, 18 Nov 2017 (10:25 IST)
ಚೆನ್ನೈ: ಅಮ್ಮಾ ಜಯಲಲಿತಾ ನಿವಾಸದ ಮೇಲೆ ರಾತ್ರೋ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ಶಶಿಕಲಾ ನಟರಾಜನ್ ಮತ್ತು ಅವರ ಕುಟುಂಬದವರ ಒಳ ಸಂಚು ಇದೆ ಎಂದು ಜಯಾ ಸೋದರ ಸೊಸೆ ದೀಪಾ ಜಯಕುಮಾರ್ ಆರೋಪಿಸಿದ್ದಾರೆ.
ಜಯಲಲಿತಾ ಉತ್ತರಾಧಿಕಾರಿ ನಾನೇ ಎಂದಿರುವ ದೀಪಾ, ನಮ್ಮ ಆಸ್ತಿ ಪಾಸ್ತಿಗೆ ಐಟಿ ಅಧಿಕಾರಿಗಳು ಹಾನಿ ಮಾಡಿದ್ದಾರೆ. ಐಟಿ ಅಧಿಕಾರಿಗಳ ವಿರುದ್ಧ ಕಾನೂನು ಮೊರೆ ಹೋಗುತ್ತೇವೆ ಎಂದು ದೀಪಾ ಹೇಳಿದ್ದಾರೆ.
ಇನ್ನೊಂದೆಡೆ, ನಿನ್ನೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಜಯಾಗೆ ಜನತೆ ಬರೆದ ಪತ್ರವನ್ನೂ ಕೊಂಡೊಯ್ದಿದ್ದಾರೆ ಎಂದು ಜಯಾ ಟಿವಿ ವ್ಯವಸ್ಥಾಪಕ ವಿವೇಕ್ ಜಯರಾಂ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ