Select Your Language

Notifications

webdunia
webdunia
webdunia
webdunia

ಪಬ್ ಜಿ ಆಡಲು ಬಿಡದ ಅಮ್ಮನ ಕೊಂದು ಶವದ ಜೊತೆ ಎರಡು ದಿನ ಕಳೆದ ಮಗ!

ಪಬ್ ಜಿ ಆಡಲು ಬಿಡದ ಅಮ್ಮನ ಕೊಂದು ಶವದ ಜೊತೆ ಎರಡು ದಿನ ಕಳೆದ ಮಗ!
ಲಕ್ನೋ , ಬುಧವಾರ, 8 ಜೂನ್ 2022 (10:30 IST)
ಲಕ್ನೋ: ಪಬ್ ಜಿ ಗೇಮ್ ಗೀಳು ಹತ್ತಿಸಿಕೊಂಡವರು ಮಾಡಿಕೊಳ್ಳುವ ಅನಾಹುತಕ್ಕೆ ಈ ಘಟನೆ ಮತ್ತೊಂದು ನಿದರ್ಶನವಾಗಿದೆ.

ಸದಾ ಮೊಬೈಲ್ ನಲ್ಲಿ ಪಬ್ ಜಿ ಆಡುವುದರಲ್ಲೇ ಮಗ್ನನಾಗಿದ್ದ 16 ವರ್ಷದ ಮಗನಿಗೆ ಅಮ್ಮ ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಆತ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದೆ. ಬಳಿಕ ಶವದೊಂದಿಗೆ ಮನೆಯಲ್ಲಿಯೇ ಎರಡು ದಿನ ಕಳೆದಿದ್ದಾನೆ. ಶವದ ವಾಸನೆ ಹೊರಹೋಗದಂತೆ ರೂಂ ಫ್ರೆಷನರ್ ಹಾಕಿದ್ದ.

ಎರಡು ದಿನ ಬಳಿಕ ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ ತಾಯಿ ಕೊಲೆಯಾಗಿರುವುದು ತಿಳಿದುಬಂದಿದೆ. ಆದರೆ ಬಾಲಕ ಮನೆಗೆ ಬಂದಿದ್ದ ಇಲೆಕ್ಟ್ರಿಷಿಯನ್ ಈ ಕೃತ್ಯವೆಸಗಿರುವುದಾಗಿ ಹೇಳಿದ್ದ. ಹೀಗಾಗಿ ತಂದೆ ಪೊಲೀಸರಿಗೆ ಕರೆ ಮಾಡಿದ್ದರು. ಆದರೆ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದಾಗ ತಾನೇ ಕೃತ್ಯ ನಡೆಸಿರುವುದಾಗಿ ಬಾಯ್ಬಿಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ವೀಡಿಯೊ ಸೋರಿಕೆ ಬೆದರಿಕೆ!?