Publish Date: Tue, 07 Jun 2022 (09:50 IST)
Updated Date: Tue, 07 Jun 2022 (10:18 IST)
ಕಲಬುರಗಿ: ಊಟ ಬೇಕೆಂದು ಕೇಳಿದ ನಾಲ್ಕು ವರ್ಷದ ಮಗುವಿಗೆ ಮಲತಾಯಿ ಚಿತ್ರಹಿಂಸೆ ನೀಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಮಗುವಿನ ಹೆತ್ತ ತಾಯಿ ನಾಲ್ಕು ವರ್ಷದ ಹಿಂದೆ ತೀರಿಕೊಂಡಿದ್ದರು. ಮಗುವನ್ನು ನೋಡಿಕೊಳ್ಳಲು ತಂದೆ ಇನ್ನೊಂದು ಮದುವೆ ಮಾಡಿಕೊಂಡಿದ್ದ. ಆದರೆ ಆಕೆ ಮಗುವಿನ ಪಾಲಿಗೆ ರಾಕ್ಷಿಸಿಯಾಗಿದ್ದಳು. ಮಗುವನ್ನು ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದಳು.
ಇದೀಗ ಊಟ ಕೇಳಿದ್ದಕ್ಕೆ ಮಗುವಿನ ಕೈಗೆ ಬರೆ ಹಾಕಿ ಕಿರುಕುಳ ನೀಡಿದ್ದಾಳೆ. ಮಗುವಿನ ಸ್ಥಿತಿ ನೋಡಲಾರದೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಗುವನ್ನು ರಕ್ಷಿಸಿ ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ. ಇತ್ತ ಮಲತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.