Select Your Language

Notifications

webdunia
webdunia
webdunia
webdunia

ಗರ್ಭಿಣಿ ಮಹಿಳೆಯನ್ನು ಗಂಡನ ಎದುರೇ ಹುರಿದುಮುಕ್ಕಿದ ಕಾಮುಕರು

ಗರ್ಭಿಣಿ ಮಹಿಳೆಯನ್ನು ಗಂಡನ ಎದುರೇ ಹುರಿದುಮುಕ್ಕಿದ ಕಾಮುಕರು
ಇಸ್ಲಾಮಾಬಾದ್ , ಮಂಗಳವಾರ, 7 ಜೂನ್ 2022 (10:30 IST)
ಇಸ್ಲಾಮಾಬಾದ್: ಗರ್ಭಿಣಿ ಮಹಿಳೆಯನ್ನು ಆಕೆಯ ಮನೆಗೆ ನುಗ್ಗಿ ಗಂಡನ ಎದುರೇ ಕಾಮುಕರು ಗುಂಪು ಅತ್ಯಾಚಾರವೆಸಗಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ಈ ಒಂದು ಹೀನಾಯ ಕೃತ್ಯದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಈಗ ಅಪರಾಧಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆಗೆ ನುಗ್ಗಿದ ಐವರು ಕಾಮುಕರ ಗುಂಪು ಪತಿಯನ್ನು ಕಟ್ಟಿ ಹಾಕಿ ಆತನ ಎದುರು ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಘಟನೆ ಬಳಿಕ ಅಸ್ವಸ್ಥಗೊಂಡ ಮಹಿಳೆ ನೇರವಾಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ. ಇದೀಗ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭರ್ಜರಿ ಬಿಯರ್ ಮಾರಾಟ