Select Your Language

Notifications

webdunia
webdunia
webdunia
webdunia

ಅಶ್ಲೀಲ ವೀಡಿಯೊ ಸೋರಿಕೆ ಬೆದರಿಕೆ!?

ಅಶ್ಲೀಲ ವೀಡಿಯೊ ಸೋರಿಕೆ ಬೆದರಿಕೆ!?
ಮಧ್ಯಪ್ರದೇಶ , ಬುಧವಾರ, 8 ಜೂನ್ 2022 (10:21 IST)
ಮಧ್ಯಪ್ರದೇಶ : ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಸೋಮವಾರ ಇಬ್ಬರು ಅಪ್ರಾಪ್ತ ಸಹೋದರಿಯರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

24 ವರ್ಷದ ಯುವಕನೊಬ್ಬ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಮತ್ತು ಅವರ ಅಶ್ಲೀಲ ವಿಡಿಯೋಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.  ನಾಯ್ ಗರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ ದಿಹಿಯಾ ಪದಾನ್ ಗ್ರಾಮದಲ್ಲಿ ಇಬ್ಬರು ಅಪ್ರಾಪ್ತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಅವರಲ್ಲಿ ಒಬ್ಬರು 12 ವರ್ಷ ವಯಸ್ಸಿನವರಾಗಿದ್ದರೆ, ಇನ್ನೊಬ್ಬರು 16 ವರ್ಷ ವಯಸ್ಸಿನವರಾಗಿದ್ದರು.  ಮೇ 23 ರಂದು ದೇವಸ್ಥಾನಕ್ಕೆ ತೆರಳಲು ಹೋಗಿದ್ದಸಹೋದರಿಯರು ಹಿಂತಿರುಗಿರಲಿಲ್ಲ. ಮರುದಿನ ಅವರ ದೇಹಗಳು ಬಾವಿಯಲ್ಲಿ ಪತ್ತೆಯಾಗಿದ್ದವು. ಈ ಬಳಿಕ ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲಾಯಿತು.

ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿಗಳ ಪಾತ್ರ ಬೆಳಕಿಗೆ ಬಂದಿದೆ. ಆರೋಪಿ ರವಿ ಚತುರ್ವೇದಿ (24) ಫೋನ್ ಮೂಲಕ ಅನುಚಿತವಾಗಿ ಮಾತನಾಡಿ ಮದುವೆಗೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ಬಿಐ ಮತ್ತೊಂದು ಭರ್ಜರಿ ಶಾಕ್?