Publish Date: Mon, 06 Jun 2022 (11:55 IST)
Updated Date: Mon, 06 Jun 2022 (11:57 IST)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಅನಾಮಿಕ ಪತ್ರವೊಂದು ಬಂದಿದ್ದು, ಜೀವ ಬೆದರಿಕೆ ಹಾಕಲಾಗಿದೆ.
ಇತ್ತೀಚೆಗೆ ಪಂಜಾಬಿ ಗಾಯಕ ಮೂಸೆ ವಾಲ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಈ ಘಟನೆ ನಡೆದ ಬಳಿಕ ಅದೇ ಸಂಘಟನೆ ಈ ಹಿಂದೆ ಸಲ್ಮಾನ್ ಖಾನ್ ಗೂ ಜೀವ ಬೆದರಿಕೆ ಹಾಕಿತ್ತು ಎಂಬ ಕಾರಣಕ್ಕೆ ಅವರ ನಿವಾಸಕ್ಕೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಇದೀಗ ಪ್ರತಿನಿತ್ಯದಂತೆ ಬೆಳಗಿನ ವಾಕಿಂಗ್ ಹೋಗುವ ಸಲ್ಮಾನ್ ತಂದೆ ಸಲೀಂ ಖಾನ್ ಗೆ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ಸಲ್ಮಾನ್ ರನ್ನು ಮೂಸೆ ವಾಲಾ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.