Publish Date: Sun, 05 Jun 2022 (18:14 IST)
Updated Date: Sun, 05 Jun 2022 (18:16 IST)
ಮುಂಬೈ: ಇತ್ತೀಚೆಗೆ ಕರಣ್ ಜೋಹರ್ ಪಾರ್ಟಿಯಲ್ಲಿ ಭಾಗವಹಿಸಿದ್ದ 55 ಸೆಲೆಬ್ರಿಟಿಗಳಿಗೆ ಕೊರೋನಾ ಹರಡಿದೆ ಎಂಬ ಸುದ್ದಿಗಳ ಬೆನ್ನಲ್ಲೇ ನಟ ಶಾರುಖ್ ಖಾನ್ ಕೊರೋನಾ ಪಾಸಿಟಿವ್ ಆದ ಸುದ್ದಿ ಬಂದಿದೆ.
ಶಾರುಖ್ ಕೂಡಾ ಇತ್ತೀಚೆಗೆ ಕರಣ್ ಜೋಹರ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕತ್ರಿನಾ ಈಗಷ್ಟೇ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲದೆ ಕಾರ್ತಿಕ್ ಆರ್ಯನ್, ಅಕ್ಷಯ್ ಕುಮಾರ್ ಕೂಡಾ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಇದೀಗ ನಟ ಶಾರುಖ್ ಖಾನ್ ಗೆ ಕೊರೋನಾ ಸೋಂಕು ತಗುಲಿರುವುದು ತಿಳಿದುಬಂದಿದೆ. ಸದ್ಯಕ್ಕೆ ಅವರು ಐಸೋಲೇಟ್ ಆಗಿದ್ದಾರೆ.