Publish Date: Sat, 04 Jun 2022 (16:42 IST)
Updated Date: Sat, 04 Jun 2022 (16:44 IST)
ಮುಂಬೈ: ಇತ್ತೀಚೆಗೆ ದಕ್ಷಿಣ ಭಾರತೀಯ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಬಾಲಿವುಡ್ ಸಿನಿಮಾಗಳ ಗಳಿಕೆ ಮೇಲೆ ಪೆಟ್ಟು ನೀಡುತ್ತಿದೆ. ಇದಕ್ಕೆ ಆರ್ ಆರ್ ಆರ್, ಕೆಜಿಎಫ್ ಸಿನಿಮಾಗಳು ಸಾಕ್ಷಿ. ಈ ಸಾಲಿಗೆ ಈಗ ಕಮಲ್ ಹಾಸನ್ ಅಭಿನಯದ ವಿಕ್ರಂ ಸೇರ್ಪಡೆಯಾಗಿದೆ.
ವಿಕ್ರಂ ಮತ್ತು ಬಾಲಿವುಡ್ ನ ಅಕ್ಷಯ್ ಕುಮಾರ್ ಅಭಿನಯದ ಪೃಥ್ವಿರಾಜ್ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು. ಆದರೆ ಜನ ವಿಕ್ರಂನ ಆಕ್ಷನ್ ಗೆ ಮಾರು ಹೋಗಿದ್ದು, ಅಕ್ಷಯ್ ಸಿನಿಮಾ ಮುಗ್ಗರಿಸಿದೆ.
ವಿಕ್ರಂ ಮೊದಲ ದಿನವೇ 24 ಕೋಟಿ ಗಳಿಕೆ ಮಾಡಿ ಸದ್ಯದಲ್ಲೇ 100 ಕೋಟಿ ಗಳಿಕೆ ಮಾಡುವತ್ತ ಸಾಗಿದೆ. ಆದರೆ ವಿಕ್ರಂ ಮೊದಲ ದಿನ ಕಲೆಕ್ಷನ್ ಮಾಡಿದ್ದು ಕೇವಲ 11 ಕೋಟಿ ರೂ. ಎನ್ನಲಾಗಿದೆ. ಹೀಗಾಗಿ ವಿಕ್ರಂ ಸಿನಿಮಾದ ಜನಪ್ರಿಯತೆ ಅಕ್ಷಯ್ ಸಿನಿಮಾದ ಗಳಿಕೆ ಮೇಲೆ ಹೊಡೆತ ನೀಡಿದೆ ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು.