Publish Date: Fri, 03 Jun 2022 (15:51 IST)
Updated Date: Fri, 03 Jun 2022 (15:52 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ನಾಯಕರಾಗಿರುವ ಜವಾನ್ ಸಿನಿಮಾದ ಟೀಸರ್ ಇಂದು ಲಾಂಚ್ ಆಗಿದೆ.
ಸಿನಿಮಾದಲ್ಲಿ ಯೋಧನಾಗಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಪಾತ್ರವನ್ನು ನೆಟ್ಟಿಗರು ಮೆಚ್ಚಿದ್ದಾರೆ. ಬಹಳ ದಿನಗಳ ನಂತರ ಶಾರುಖ್ ಸಿನಿಮಾದ ಟೀಸರ್ ಬಿಡುಗಡೆಯಾಗಿರುವುದು ಅಭಿಮಾನಿಗಳಿಗೂ ಖುಷಿ ತಂದಿದೆ.
ಸಿನಿಮಾ ಮುಂದಿನ ವರ್ಷ ಜೂನ್ 2 ರಂದು ರಿಲೀಸ್ ಆಗಲಿದೆ. ಇದೀಗ ಟೀಸರ್ ಬಿಡುಗಡೆಯಾಗಿದ್ದು, ಈ ಸಿನಿಮಾ ಕೇವಲ ಹಿಂದಿಯಲ್ಲಿ ಮಾತ್ರವಲ್ಲದೆ, ಕನ್ನಡ, ಮಲಯಾಳಂ, ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ಹೇಳಿದೆ.