Publish Date: Sat, 04 Jun 2022 (09:50 IST)
Updated Date: Sat, 04 Jun 2022 (09:52 IST)
ನವದೆಹಲಿ: ಟೀಂ ಇಂಡಿಯಾ ಜೊತೆ ಟಿ20 ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ದ.ಆಫ್ರಿಕಾ ಕ್ರಿಕೆಟಿಗರು ಕೊರೋನಾ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ಎಲ್ಲಾ ಆಟಗಾರರು ಎರಡು ದಿನ ಐಸೋಲೇಷನ್ ಗೊಳಗಾಗಿ ಕೊರೋನಾ ಪರೀಕ್ಷೆಗೊಳಗಾಗಿದ್ದಾರೆ. ಈ ವರದಿಯಲ್ಲಿ ಎಲ್ಲರ ವರದಿ ನೆಗೆಟಿವ್ ಬಂದಿದೆ.
ಹೀಗಾಗಿ ಆಫ್ರಿಕಾ ಕ್ರಿಕೆಟಿಗರು ದೆಹಲಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಜೂನ್ 9 ರಿಂದ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ.