Select Your Language

Notifications

webdunia
webdunia
webdunia
webdunia

ಜಸ್ಪ್ರೀತ್ ಬುಮ್ರಾ ಪತ್ನಿ ಮೇಲೆ ರೋಹಿತ್ ಶರ್ಮಾ ಫ್ಯಾನ್ಸ್ ಗರಂ

ಜಸ್ಪ್ರೀತ್ ಬುಮ್ರಾ ಪತ್ನಿ ಮೇಲೆ ರೋಹಿತ್ ಶರ್ಮಾ ಫ್ಯಾನ್ಸ್ ಗರಂ
ಮುಂಬೈ , ಶನಿವಾರ, 4 ಜೂನ್ 2022 (09:10 IST)
ಮುಂಬೈ: ಟೀಂ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಆಡುವ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಮೇಲೆ ರೋಹಿತ್ ಶರ್ಮಾ ಅಭಿಮಾನಿಗಳು ಗರಂ ಆಗಿದ್ದಾರೆ.

ಇದಕ್ಕೆ ಕಾರಣ ಸಂಜನಾ ರೋಹಿತ್ ಶರ್ಮಾರಿಗಿಂತ ಕೊಹ್ಲಿಯೇ ಅತ್ಯುತ್ತಮ ನಾಯಕ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದನ್ನು ಲೈಕ್ ಮಾಡಿರುವುದು.

ಕ್ರಿಕೆಟ್ ನಿರೂಪಕಿಯೂ ಆಗಿರುವ ಸಂಜನಾ ಕೊಹ್ಲಿಯೇ ಬೆಸ್ಟ್ ನಾಯಕ ಎಂಬ ಪೋಸ್ಟ್ ಲೈಕ್ ಮಾಡಿರುವುದು ರೋಹಿತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಬುಮ್ರಾ ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ, ಐಪಿಎಲ್ ನಲ್ಲೂ ರೋಹಿತ್ ನಾಯಕತ್ವದಲ್ಲಿ ಆಡುತ್ತಾರೆ. ಒಂದು ವೇಳೆ ರೋಹಿತ್ ರನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಮುಂದೆ ತಮ್ಮ ಪತಿ ಬುಮ್ರಾ ಮುಂಬೈ ಇಂಡಿಯನ್ಸ್ ನಾಯಕರಾಗಬಹುದು ಎಂಬ ಲೆಕ್ಕಾಚಾರ ಸಂಜನಾರಿಗಿರಬಹುದು ಎಂದು ನೆಟ್ಟಿಗರು ಜರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾರನ್ನು ಹಾಡಿ ಹೊಗಳಿದ ಮೊಹಮ್ಮದ್ ಸಿರಾಜ್