Publish Date: Wed, 25 May 2022 (09:20 IST)
Updated Date: Wed, 25 May 2022 (09:38 IST)
ಮುಂಬೈ: ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲೇ ಕೂಟ ಮುಗಿಸಿದ ಮುಂಬೈ ನಾಯಕ ರೋಹಿತ್ ಶರ್ಮಾ ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಸದ್ಯಕ್ಕೆ ರೋಹಿತ್ ತಮ್ಮ ಪತ್ನಿ, ಪುತ್ರಿ ಜೊತೆ ಮಾಲ್ಡೀವ್ಸ್ ನಲ್ಲಿ ರಜಾ ಮಜಾದಲ್ಲಿದ್ದಾರೆ. ಇಲ್ಲಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ರೋಹಿತ್ ತಮ್ಮ ಮಗಳೊಂದಿಗೆ ಆಡುತ್ತಾ ರಿಲ್ಯಾಕ್ಸ್ ಆಗುತ್ತಿದ್ದಾರೆ.
ಐಪಿಎಲ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳಬೇಕಿದೆ. ಇದಕ್ಕೂ ಮೊದಲು ರೋಹಿತ್ ಕುಟುಂಬದೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.